ಉಪ್ಪಿನಂಗಡಿ : ಬಾರ್ಯ ಮೂರುಗೋಳಿಯಲ್ಲಿ ಕಾರ್ಯಾಚರಿಸುವ ಎಟಿಎಂ ಕೇಂದ್ರಕ್ಕೆ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ್ದಾರೆ.
ಕಳ್ಳರು ಮುಖಗವಸು, ಕೈಗೆ ಗ್ಲೌಸ್ ಧರಿಸಿ ಎಟಿಎಂ ಮೆಷಿನ್ ಮುರಿಯಲು ಪ್ರಯತ್ನಿಸಿದ್ದಾರೆ.
ಬಾಗಿಲು ತೆರೆಯುವ ಪಾಸ್‌ವರ್ಡ್ ಅವರಿಗೆ ಸಿಕ್ಕಿಲ್ಲ. ಹಾಗಾಗಿ ನಗದು ಕೋಶದ ಬಾಗಿಲು ತೆರೆಯಲು ವಿಫಲರಾಗಿದ್ದಾರೆ ಎನ್ನಲಾಗಿದೆ.
ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಪರಿಶೀಲನೆ ನಡೆಸಿದ್ದಾರೆ.

























