ಪುತ್ತೂರು : ಕೆಲ ದಿನಗಳ ಹಿಂದೆ ನಿಧನರಾದ ಗಣೇಶ್ ಭಾಗ್ (ನೆಹರುನಗರ) ನಿವಾಸಿ ಜಯಂತಿ ಅವರ ಸ್ಮರಣಾರ್ಥ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದೊಂದಿಗೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರುಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ ಪುತ್ರ ಚೇತಕ್ ಅವರಿಗೆ 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಹಾಸ್ಪಿಟಲ್ ಬೆಡ್ ಅನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ, ದಿ. ಜಯಂತಿ ಅವರ ಪುತ್ರ ಉಮೇಶ್, ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿ ಮಠ, ಹರೀಶ್ ಮರುವಾಳ ಮತ್ತು ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.
ಚೇತಕ್ ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


























