ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ಸಾಮರಸ್ಯ ಪುತ್ತೂರು ವಿಭಾಗದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಪುತ್ತೂರು ತಾಲೂಕಿನ ವಿವಿಧೆಡೆ ಸಾಮಾಜಿಕ ಸಾಮರಸ್ಯ ಮೆರೆಸುವ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ನಡೆಯುತ್ತಿದ್ದು, ನ.3 ರಂದು ಮೊಟ್ಟೆತ್ತಡ್ಕದ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಮಣ್ಣಾಪು ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೀಪ ಜ್ಯೋತಿಯು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಲಿದ್ದು ಬಳಿಕ ಮಣ್ಣಾಪು ಪರಿಸರದ ಮನೆಗಳಲ್ಲಿ ದೀಪವನ್ನು ಪ್ರಜ್ವಲಿಸಲಾಗುತ್ತದೆ.
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಶ್ರೀ ಕ್ಷೇತ್ರದ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವ ಹಿಂದು ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಸಾಮರಸ್ಯ ಪುತ್ತೂರು ವಿಭಾಗದ ಸದಸ್ಯರಾದ ಅಪ್ಪಯ್ಯ ಮಣಿಯಾಣಿ, ವಿನ್ನರ್ ಸಾಫ್ಟ್ ಡ್ರಿಂಕ್ಸ್‌ನ ರಮೇಶ್, ಶ್ರೀ ಕ್ಷೇತ್ರದ ಅರ್ಚಕ ಕುಂಡ ಮೊಗೇರ ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಸುರೇಂದ್ರ ಪೂಜಾರಿ ಮೊಟ್ಟೆತ್ತಡ್ಕ, ಸುಜೀರ್ ಶೆಟ್ಟಿ ನುಳಿಯಾಲು ಉಪಸ್ಥಿತರಿದ್ದರು.