ಬೆಂಗಳೂರಲ್ಲಿ ಶುರುವಾದ ಈ ಕ್ರೈಮ್ ಕಹಾನಿ ಸೇಲಂ ಸುತ್ತಾಡಿ ಕೊನೆಗೆ ಒಡಿಶಾದಲ್ಲಿ ಅಂತ್ಯವಾಗಿದೆ. ಅಪ್ಪ ಅಮ್ಮನ ಪ್ರೀತಿನೇ ಗೊತ್ತಿಲ್ಲದ ಆ ಹುಡುಗಿ ಪಾಲಿಗೆ ಇವರೇ ಪ್ರಪಂಚ ಆಗಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಇವ್ರ ಸೇವೆಯಲ್ಲೇ ದಿನ ಕಳೀತಾ ಇದ್ದಳು. ಆದ್ರೆ, ಆಕೆ ಮಾಡಿದ್ದ ಕೆಲಸಕ್ಕೆ ಕೊನೆಗೆ ಆ ದಂಪತಿ ಕೊಟ್ಟ ಕಾಣಿಕೆ ಮಾತ್ರ ಘನಘೋರ.!
15 ವರ್ಷದ ಬಾಲಕಿ.. ಹೆಸರು ಸಮೀನಾ ಅಂತ. ಅಪ್ಪ.. ಅಮ್ಮನ ಪ್ರೀತಿನೇ ಕಾಣದ ಅನಾಥೆ. ಅನಾಥಾಶ್ರಮದಲ್ಲಿದ್ದ ಇವಳ ಪಾಲಿಗೆ ದಂಪತಿಯೊಂದು ದೇವರಾಗಿ ಬಂದಿದ್ರು. ಇವ್ರೇ ನನ್ನ ಅಪ್ಪ ಅಮ್ಮ ನಂಬಿದ್ದವಳ ಬಾಳಿಗೆ ಇವ್ರೇ ಅಕ್ಷರಶ: ರಾಕ್ಷಸರಾದ ಕಥೆ ಇದು.
ಐಟಿ ದಂಪತಿ ಹೆಸರು ಅಭಿನೇಶ್ ಹಾಗೂ ಅಶ್ವಿನಿ ಪಟೇಲ್ ಅಂತ. ಇವ್ರು ಅಂತಿಂಥ ಮನುಷ್ಯರಲ್ಲ. ರಾಕ್ಷಸರನ್ನೂ ಮೀರಿಸೋ ನರರಾಕ್ಷಸರು. ಇವ್ರು ಮಾಡಿದ ಘನಂಧಾರಿ ಕೆಲಸ ಕೇಳಿದ್ರೆ.. ಪಕ್ಕಾ ಶಾಕ್ ಆಗ್ತೀರಾ.
ಅಷ್ಟಕ್ಕೂ ಈ ಅಭಿನೇಶ್ ಹಾಗೂ ಅಶ್ವಿನಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಗಳಾಗಿ ಕೆಲಸ ಮಾಡ್ತಾ ಇದ್ದರು. ಅನಾಥಶ್ರಮಾದಿಂದ ಸಮೀನಾಳನ್ನ ಮನೆಕೆಲಸಕ್ಕೆ ಮನೆಗೆ ಕರೆತಂದಿದ್ರು. 5 ವರ್ಷದ ತಮ್ಮ ಮಗುವನ್ನ ನೋಡಿಕೊಳ್ಳಲು ಹೇಳಿದ್ದರು. ಅಶ್ವಿನಿ ಪಟೇಲ್ಗೆ ನಿತ್ಯ ಬಿಸಿ ನೀರು ಕುಡಿಯುವ ಅಭ್ಯಾಸ ಇತ್ತು. ಹೀಗೆ ಬಿಸಿ ನೀರು ತಂದು ಕೊಡುವಾಗ ಸಮೀನಾ ಕೈಯಿಂದ ಬಿಸಿ ನೀರು ಜಾರಿ ಅಶ್ವಿನಿ ಮೇಲೆ ಬಿದ್ದಿದೆ. ಅಷ್ಟೇ ಕೋಪಗೊಂಡ ಅಶ್ವಿನಿ ದೊಣ್ಣೆಯಿಂದ ಸಮೀನಾಗೆ ಹೊಡೆದಿದ್ದಾಳೆ. ಪರಿಣಾಮ ಸಮೀನಾ ನೆಲಕ್ಕೆ ಬಿದ್ದಿದ್ದಾಳೆ. ಪತಿ ಮನೆಗೆ ಬಂದಾಗ ಆಕೆಯನ್ನ ಎಬ್ಬಿಸೋಕೆ ಪ್ರಯತ್ನ ಪಟ್ಟಾಗ ಆಕೆ ಸತ್ತಿರೋದು ಗೊತ್ತಾಗಿದೆ.
ಬೆಂಗಳೂರಲ್ಲಿ ಕೊಲೆ, ಸೇಲಂನಲ್ಲಿ ಮೃತ ದೇಹ, ಒಡಿಶಾಗೆ ಪರಾರಿ!
ಹುಡುಗಿ ಸತ್ತ ಬಳಿಕ ಅಲರ್ಟ್ ಆದ ದಂಪತಿ ಆಕೆಯನ್ನ ವಿವಸ್ತ್ರಗೊಳಿಸಿ ಸ್ಯೂಟ್ಕೇಸ್ಗೆ ತುಂಬಿದ್ದಾರೆ. ತಮಿಳುನಾಡಿದ ಸೇಲಂಗೆ ಹೋಗಿ ಸಂಗಿಕರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸೂಟ್ಕೇಸ್ ಎಸೆದಿದ್ದಾರೆ. ಇಷ್ಟಾದ್ಮೇಲೆ ಕೆಲಸ ಮುಗೀತು ಅಂತಾ ಒಡಿಸ್ಸಾಗೆ ಪರಾರಿಯಾಗಿದ್ದರು.
ಅದ್ಯಾವಾಗ ಪೊಲೀಸರಿಗೆ ಸ್ಯೂಟ್ಕೇಸ್ನಲ್ಲಿದ್ದ ಮೃತದೇಹದ ವಾಸನೆ ಬಡಿತೋ.. ಕಾರ್ಯಚರಣೆ ಶುರು ಮಾಡಿದರು.. ಸಿಸಿಟಿವಿ ಕ್ಯಾಮೆರಾಗಳ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೆ ಬಂದು ತಲುಪಿದ್ದು, ಒಡಿಶಾದ ಭುವನೇಶ್ವರ. ತಲೆ ಮರೆಸಿಕೊಂಡಿದ್ದ ದಂಪತಿಗೆ ಪೊಲೀಸರು ಜೈಲು ದಾರಿ ತೋರಿಸಿದ್ದಾರೆ.
ಕೊ*ಲೆ ಮಾಡಿ ದಂಪತಿ ಜೈಲು ಸೇರಿದ್ರೆ, ಅವರ ಮಗ ಕೂಡ ಅನಾಥವಾಗಿದ್ದಾನೆ. ಮತ್ತೊಂದ್ಕಡೆ, ಅನಾಥಾಶ್ರಮದಿಂದ ತಂದೆ ತಾಯಿ ಪ್ರೀತಿ ಬಯಸಿ ಮನೆಗೆ ಬಂದವಳ ಕೊಲೆಯಾಗಿರೋದಂತೂ ದುರಂತ.