ಮಂಗಳೂರು: ಬೋಳಾರ ಎಮ್ಮೆಕೆರೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಮೆಹರ್ ಬಾನು (18) ಮನೆಯಿಂದ ನಾಪತ್ತೆಯಾಗಿದ್ದಾರೆ.
ಮಂಗಳೂರಿನ ಕೊಡಿಯಾಲಬೈಲ್‌ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ಅವರು 10 ದಿನಗಳಿಂದ ಕಾಲೇಜ್ ಗೆ ಹೋಗದೆ ಮನೆಯಲ್ಲಿದ್ದರು.
ಅ.24 ರಂದು ಸಂಜೆ ತಾಯಿ ಹೊರಗೆ ಹೋಗಿ ಬಂದ ಸಂದರ್ಭ ಮಗಳು ಮನೆಯಲ್ಲಿ ಇರಲಿಲ್ಲ ಈ ಬಗ್ಗೆ ಎಲ್ಲಾ ಕಡೆಗಳಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಪಾಂಡೇಶ್ವರ ಠಾಣೆ ಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.