ಇತ್ತೀಚಿನ ದಿನಗಳಲ್ಲಿ ಮದುವೆ, ಮಕ್ಕಳಾದ ಬಳಿಕವೂ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವ, ಗಂಡನಾದವನು ಮನೆಯಲ್ಲಿ ಹೆಂಡ್ತಿ ಇದ್ದರೂ ಬೇರೊಂದು ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಸಾಕಷ್ಟು ಕೇಳಿ ಬರುತ್ತಿರುತ್ತವೆ. ಅನೈತಿಕ ಸಂಬಂಧ ಕಾರಣ ಮನೆ ಜಗಳ ಬೀದಿಗೆ ರಂಪವಾದ ಅದೆಷ್ಟೋ ಘಟನೆಗಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಇದೀಗ ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದಾಗ ಆಕೆ ರೈಲ್ವೇ ನಿಲ್ದಾಣದಲ್ಲಿ ತನ್ನ ಗಂಡನ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ಮೂರು ಜನರ ನಡುವೆ ಭಾರೀ ಫೈಟ್ ಏರ್ಪಟ್ಟಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ.
ಹೌದು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಿಆರ್ಪಿಎಫ್ ಜವಾನನಾಗಿ ಕಾರ್ಯನಿರ್ವಹಿಸುತ್ತಿದ್ದ ಈ ವ್ಯಕ್ತಿ, ತನ್ನ ಪತ್ನಿ ಆಕೆಯ ಪ್ರಿಯಕರನೊಂದಿಗೆ ಓಡಿಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಪೊಲೀಸ್ ಪೇದೆಯಾಗಿ ಕಾರ್ಯನಿವರ್ಹಿಸುತ್ತಿದ್ದ ಈ ಮಹಿಳೆ ಒಂದು ತಿಂಗಳಿನ ಹಿಂದೆಯೇ ಮನೆ ಬಿಟ್ಟು ಹೋಗಿದ್ದಳು.
ಈ ಬಗ್ಗೆ ಪೊಲೀಸ್ ದೂರು ನೀಡಿ ಆಕೆಯನ್ನು ಹುಡುಕುವ ಪ್ರಯತ್ನದಲ್ಲಿ ನಿರತರಾಗಿದ್ದನು ಈ ವ್ಯಕ್ತಿ. ಅಕ್ಟೋಬರ್ 31 ರಂದು ಆಕೆ ಪಾಟ್ನಾ-ಸಿಂಗ್ರೌಲಿ ರೈಲಿನ ಮೂಲಕ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಪ್ರಯತ್ನಿಸಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪಾಟ್ನಾ ಜಂಕ್ಷನ್ಗೆ ಓಡಿ ಬಂದ ವ್ಯಕ್ತಿ ರೈಲ್ವೆ ಸ್ಟೇಷನ್ನಲ್ಲಿ ತನ್ನ ಹೆಂಡತಿ ಪರ ಪುರುಷನೊಂದಿಗೆ ಇರುವುದನ್ನು ಕಂಡು ಕೋಪಗೊಂಡು ದೊಡ್ಡ ರಂಪಾಟವನ್ನೇ ಮಾಡಿದ್ದಾನೆ.
ಕೋಪದಲ್ಲಿ ಆ ವ್ಯಕ್ತಿ ಪತ್ನಿಯ ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಳಿಸಿ ನಂತರ ತನ್ನ ಹೆಂಡತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಆ ತಕ್ಷಣವೇ ಪ್ರಿಯಕರ ಭಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾನೆ.