ಹಿಂದೂ ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದಾನೆಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಎಲಿಮಲೆಯಲ್ಲಿ ನಡೆದಿದೆ.
ಎಲಿಮಲೆಯಲ್ಲಿ ಯುವಕರ ತಂಡವೊಂದು ನಯಾಜ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದ್ದು, ಏಟು ತಿಂದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸ್ಥಳೀಯ ನಿವಾಸಿಯೋರ್ವ ಮಾತನಾಡಲಿಕ್ಕಿದೆಯೆಂದು ತನ್ನನ್ನು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹೊಡೆದಿರುವುದಾಗಿಯೂ, ಮಹಿಳೆಯರಿಗೆ ಮೆಸೇಜ್ ಮಾಡುವುದೇಕೆಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯುವಕ ದೂರು ನೀಡಿದ್ದಾನೆ.

























