ಪುತ್ತೂರು: ನಿದ್ದೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಬಿದ್ದ ಘಟನೆ ಕೈಕಾರದ ಸಮೀಪ ಬಳಕ್ಕ ಎಂಬಲ್ಲಿ ನಡೆದಿದೆ.

ಕಾಸರಗೋಡ್ ಜಿಲ್ಲೆಯ ಬದಿಯಡ್ಕ ಮೂಲದ ಡಾ. ವಿವೇಕ್ ಅವರಿಗೆ ಸೇರಿದ ಕಾರು ಸುಮಾರು 50 ಅಡಿ ಕಂದಕಕ್ಕೆ ಬಿದ್ದಿದೆ. ಘಟನೆಯಿಂದ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ.
























