ಬಾಗಲಕೋಟೆ: ಕೃಷ್ಣ ನದಿಯಲ್ಲಿ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಶವ ಪತ್ತೆಯಾಗಿದೆ. ನವೆಂಬರ್ 3 ರಂದು ಸಂಜೆ 5 ಗಂಟೆ ಸುಮಾರಿಗೆ ಯುವತಿ ಕೃಷ್ಣಾ ನದಿಗೆ ಹಾರಿದ್ದಳು ಎಂಬ ಮಾಹಿತಿ ಲಭ್ಯವಾಗಿತ್ತು.
ಆ ಕೂಡಲೇ ಘಟನಾ ಸ್ಥಳಕ್ಕೆ ಬಂದಿದ್ದ ಜಮಖಂಡಿ ಹಾಗೂ ಸಾವಳಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಸ್ಥಳೀಯ ಮೀನುಗಾರರು ಯುವತಿಗಾಗಿ ಹುಡುಕಾಟ ನಡೆಸಿದ್ದರು. ಆಗ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.
ಮೃತ ಯುವತಿಯನ್ನ ವಿಜಯಪುರ ಜಿಲ್ಲೆಯ ಮಹಲ ಐನಾಪುರ ಗ್ರಾಮದ 21 ವರ್ಷದ ಕಲ್ಪನಾ ಚಂದು ಬಂಡಿ ಎಂದು ಗುರುತಿಸಲಾಗಿದೆ. ಜಮಖಂಡಿಯ ಚಿಕ್ಕಪಡಸಲಗಿ ಸಮೀಪದ ಯಲ್ಲಮ್ಮನ ದೇವಸ್ಥಾನಕ್ಕೆ ಬಂದ ವೇಳೆ ಯುವತಿ ಕೃಷ್ಣಾ ನದಿಯಲ್ಲಿ ಜಿಗಿದಿದ್ದಳು ಎಂದು ತಿಳಿದು ಬಂದಿದೆ. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.