ಸುದೀರ್ಘ 4 ದಶಕಗಳ ಕಾಲ ದೈವಾರಾಧನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ನಾದಸ್ವರ ವಾದಕರು ಗೋಪಾಲ ಜೋಗಿ ಹಾಗೂ ದೈವ ನರ್ತಕರಾದ ಶ್ರೀ ಶೇಖರ ಪರವ ಇವರನ್ನು ಊರ ನಾಗರಿಕರ ಪರವಾಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು. ನಂತರ ನಮ್ಮೂರ ನಾಗರಿಕರಿಂದ ಕಾಪುಮಜಲು ದ್ವಾರದ ಬಳಿ ಸಾಧಕರನ್ನು ಸ್ವಾಗತಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಜೊತೆ ಕೃಷ್ಣಯ್ಯ ಕೆ ಅರಮನೆ ವಿಟ್ಲ, ಜಯರಾಮ್ ಅರಮನೆ ವಿಟ್ಲ, ಕಾಪುಮಜಲು ಮಲರಾಯಿ ದೈವದ ಪಾತ್ರಿ ನಾಗೇಶ್ ಗೌಡ ಕಾಪುಮಜಲು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ ಕೊಡಂಗಾಯಿ,ಚರಣ್ ಕಾಪುಮಜಲು, ಸಂಜೀವ ಪೂಜಾರಿ, ವಸಂತ್ ಶೆಟ್ಟಿ ಕಾಪುಕೋಡಿ, ಫ್ರೆಂಡ್ಸ್ ಕಾಪುಮಜಲು(ರಿ.) ಇದರ ಅಧ್ಯಕ್ಷರಾದ ವಿನಯ್ ಜೋಗಿ ಕಾಪುಮಜಲು,ಕಾರ್ಯದರ್ಶಿ ಚರಣ್ ಜೋಗಿ, ದೇವದಾಸ್ ಪೂಜಾರಿ ಕಾಪುಮಜಲು, ಶಿಲ್ಪಶ್ರೀ ಯುವಕ ಮಂಡಲ (ರಿ.) ಕೊಡಂಗೈ ಇದರ ಅಧ್ಯಕ್ಷರಾದ ರೋಹಿತ್ ರೈ, ರವೀಶ್ ರೈ ಎರ್ಮೆನಿಲೆ, ಬಿಜೆಪಿ ಬೂತ್ ಅಧ್ಯಕ್ಷರಾದ ಆನಂದ ಮಡಿವಾಳ ಕಾಪುಮಜಲು, ಪದ್ಮನಾಭ ಮಡಿವಾಳ, ಬಾಬು ಜೋಗಿ, ಜನಾರ್ದನ ಜೋಗಿ, ಲಕ್ಷಣ ಜೋಗಿ, ರಕ್ಷಿತ್ ಶೆಟ್ಟಿ,ರಂಜಿತ್ ಜೋಗಿ ನವೀನ್ ಜೋಗಿ,ಸೀತಾರಾಮ ಕಾಪುಮಜಲು ಉಪಸ್ಥಿತರಿದ್ದರು.
