ಮದುವೆಯಾಗಿ ಗಂಡನೊಂದಿಗೆ ಜೀವನ ನಡೆಸುತ್ತಿರುವ ಮಹಿಳೆಯೊಬ್ಬರ ಫೋಟೋ ಬಳಸಿ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನಕಲಿ ಖಾತೆಯಲ್ಲಿ ಸೃಷ್ಟಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ವತಃ ಮಹಿಳೆ “ನನಗೆ ಈಗಾಗಲೇ ಮದುವೆಯಾಗಿದೆ, ಆದರೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನನ್ನ ಫೋಟೋ ಬಳಸಿ ನಕಲಿ ಖಾತೆಯನ್ನು ತೆರೆಲಾಗಿದೆ. ಜನರನ್ನು ಮೂರ್ಖರನ್ನಾಗಿಸುತ್ತಿರುವ ಈ ಸೈಟ್ ಅನ್ನು ಬಳಸುವಾಗ ಎಚ್ಚರದಿಂದಿರಿ” ಎಂದು ಎಚ್ಚರಿಸಿದ್ದಾರೆ.
ಅನೇಕ ಜನರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್ ಸೈಟ್ ಬಳಸುತ್ತಿದ್ದಾರೆ. ಈ ಸೈಟ್ನಲ್ಲಿ ಪ್ರೀಮಿಯಂಗೆ ಶುಲ್ಕ ಪಾವತಿಸಿದರೆ ನಕಲಿ ಖಾತೆ ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದೀಗ ವಿವಾಹಿತ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್ ಜನರನ್ನು ಹೇಗೆ ಮೂರ್ಖರನ್ನಾಗಿಸುತ್ತಿದೆ ಎಂಬುದರ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಾಸ್ತವವಾಗಿ ಮದುವೆಯಾಗಿ ಗಂಡನೊಂದಿಗೆ ಜೀವನ ಮಾಡುತ್ತಿರುವ ಮಹಿಳೆಯೊಬ್ಬರ ಫೋಟೋ ಬಳಸಿ ನಕಲಿ ಖಾತೆಯಲ್ಲಿ ಸೃಷ್ಟಿಸಲಾಗಿದೆ. ಇದನ್ನು ಗಮನಿಸಿದ ಮಹಿಳೆ ತಕ್ಷಣ ಮ್ಯಾಟ್ರಿಮೋನಿಯಲ್ ಸೈಟ್ ವಿರುದ್ದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.