ಇತ್ತೀಚೆಗೆ ನಿಧನರಾದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಇದರ ವಿಟ್ಲ ಘಟಕದ ಸಲಹೆಗಾರರಾದ, ರೈತ ಪರ ಹೋರಾಟಗಾರ ದಿವಂಗತ ಲಕ್ಷ್ಮಣ ಗೌಡ ಮಂಜಲಾಡಿ ಅವರ ಶ್ರದ್ಧಾಂಜಲಿ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.
ಪುತ್ತಿಲ ಪರಿವಾರ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರು ಲಕ್ಷ್ಮಣ ಗೌಡ ಅವರು ಪುತ್ತಿಲ ಪರಿವಾರದಲ್ಲಿ ಅವರು ಮಾಡಿದ ಕಾರ್ಯಗಳು ಹಾಗೂ ಬಡವರ ಬಗ್ಗೆ ಇರುವ ಕಾಳಜಿಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ ಅವರು ದಿವಂಗತರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ಲಕ್ಷ್ಮಣ ಗೌಡರ ಒಡನಾಡಿ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಣಿ ಸದಸ್ಯ ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರ್ ಹಿಂದುತ್ವದ ಬಗ್ಗೆ , ಹಿಂದೂ ಸಂಘಟನೆಗಳ ಜೊತೆ ಅವರಿಗಿದ್ದ ಸಂಪರ್ಕವನ್ನು ವಿವರಿಸಿದರು.
ಮೃತರ ಸದ್ಗತಿಗಾಗಿ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.
ವಿಟ್ಲ ಅರಮನೆಯ ಜಯರಾಮ್ ಬಲ್ಲಾಳ್, ಪುತ್ತಿಲ ಪರಿವಾರ ಟ್ರಸ್ಟ್ ವಿಟ್ಲ ಘಟಕದ ಅಧ್ಯಕ್ಷ ಮೋಹನ್ ಸೇರಾಜೆ, ಪ್ರಮುಖರಾದ ರಘುರಾಮ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಬಳಿಕ ದಿವಂಗತ ಲಕ್ಷ್ಮಣ ಗೌಡರ ಮನೆಗೆ ಭೇಟಿದ ಅರುಣ್ ಕುಮಾರ್ ಪುತ್ತಿಲರವರು ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಲಕ್ಷ್ಮಣ್ ಮಾಡ, ರಾಜೇಶ್ ಮಕರಂದ, ರೂಪೇಶ್, ಶರತ್ ಎನ್ಎಸ್, ರಾಜೇಶ್ ಕರವೀರ, ರವಿಶಂಕರ್ ವಿಟ್ಲ, ರಾಜೇಶ್ ಭಟ್, ಸದಾಶಿವ ನಾಯಕ್, ವಿಶ್ವೇಶ್ವರ ಆಲಂಗಾರು ಉಪಸ್ಥಿತರಿದ್ದರು.