ಪುತ್ತೂರು: ದ್ವಾರಕಾ ಪ್ರತಿಷ್ಠಾನ (ರಿ)ಇದರ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ಬಸ್ಸು ತಂಗುದಾಣ’ದ ಉದ್ಘಾಟನಾ ಕಾರ್ಯಕ್ರಮವು ನ.09 ರಂದು ನಡೆಯಲಿದೆ.
ನೂತನ ಬಸ್ ತಂಗುದಾಣವನ್ನು ಪುತ್ತೂರು ವಿಧಾನಸಭಾ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ
ಶ್ರೀ ಗೋಪಾಲ ಕೃಷ್ಣ ಭಟ್ ಉಪಸ್ಥಿತರಿರಲಿದ್ದು ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷರಾದ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ ಪೂಜಾರಿ ಬಡಾವು,ನಗರಸಭಾ ಸದಸ್ಯರಾದ ಶ್ರೀ ಶೀನಪ್ಪ ನಾಯ್ಕ್, ಪೌರಾಯುಕ್ತರಾದ ಮಧು ಎಸ್ ಮನೋಹರ್ ಮತ್ತು ಸಂಪ್ಯ ಠಾಣಾ ಅಧಿಕಾರಿ ಜಂಬೂರಾಜ್ ಮಹಾಜನ್ ಭಾಗಿಯಾಗಲಿದ್ದಾರೆ.

























