ಪುತ್ತೂರು: ಪುತ್ತೂರು ಸಬ್ ರಿಜಿಸ್ಡರ್ ಕಚೇರಿಯಲ್ಲಿನ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ಕೆಲವು ತಾಂತ್ರಿಕಸಮಸ್ಯೆಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡುವುದು ಹಾಗೂ ಇ ಖಾತೆ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಅತೀಕ್ ರವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು.
ಗುರುವಾರ ವಿಧಾನ ಸೌಧ ಕಚೇರಿಯಲ್ಲಿ ಅವರನ್ನುಭೇಟಿಯಾದ ಶಾಸಕರು ಸಬ್ ರಿಜಿಸ್ಡರ್ ಕಚೇರಿಯಲ್ಲಿನ ತಾಂತ್ರಿಕಸಮಸ್ಯೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಕಂದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಯಾವುದೇ ರಿಜಿಸ್ಟರ್ ಮಾಡಬೇಕಾದಲ್ಲಿ ಕಚೇರಿಯಲ್ಲೇ ಕುಳಿತು ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಇ ಖಾತೆ ನೀಡುವಲ್ಲಿಯೂ ವಿಳಂಬವಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಸ್ಯೆ ಪುತ್ತೂರು,ಮಂಗಳೂರು ಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದು ಸರಕಾರ ತಕ್ಷಣ ಎಚ್ಚೆತ್ತು ಇದರ ಲ್ಲಿನ ಲೋಪ ದೋಷಗಳನ್ನು ಸರಿಪಡಿಸುವಂತೆ ಮನವಿ ಮಾಡಿದರು.