ಶಿವಮೊಗ್ಗ: ಊಟ ಬಡಿಸದೇ ಫೋನ್ ನಲ್ಲಿ ಬ್ಯುಸಿ ಯಾಗಿದ್ದ ಪತ್ನಿಯನ್ನು ಪತಿಯೇ ಕೊಂದ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಮನೋಜ್ ಮತ್ತು ಗೌರಮ್ಮ ದಂಪತಿಗಳ ನಡುವೆ ಕಲಹ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಪತ್ನಿ ಗೌರಮ್ಮ ಫೋನ್ ಬಳಕೆ ಹೆಚ್ಚಾಗಿದ್ದರಿಂದ ಬೇಸತ್ತಿದ್ದ ಪತಿ ಆ ದಿನ ಊಟ ಬಡಿಸುವಂತೆ ಹೇಳಿದರು ಪತ್ನಿ ಕ್ಯಾರೆ ಎನ್ನದೆ ಫೋನ್ ನಲ್ಲಿ ಬ್ಯುಸಿ ಯಾಗಿದ್ದಳು.
ಇದರಿಂದ ಕೋಪಗೊಂಡ ಪತಿ ಮನೋಜ್ ಪತ್ನಿಗೆ ಹಲ್ಲೆ ನಡೆಸಿ ನಂತರ ಟವಲ್ ನಿಂದ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿದ್ದಾನೆ.
ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.