ಪುತ್ತೂರು: ಸರಕಾರದ ಪಂಚ ಗ್ಯಾರಂಟಿಗಳಲ್ಲಿಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟ ಮಹಿಳೆಯೋರ್ವರು ಆ ಹಣದಿಂದ ತನ್ನ ಗಂಡನಿಗೆ ಸ್ಕೂಟರ್ ಕೊಡಿಸಿದ್ದಾರೆ.
ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆ ತನ್ನ ಖಾತೆಗೆ ಜಮೆಯಾಗಿರುವ ಗೃಹಲಕ್ಣ್ಮೀ ಹಣದಿಂದ ಪೈಂಟರ್ ಕೆಲಸಕ್ಕೆ ತಡರಳುವ ತನ್ನ ಗಂಡ ಸಲೀಂ ಎಂಬವರಿಗೆ ಕೆಲಸಕ್ಕೆ ಹೋಗಲು ಸ್ಕೂಟಿಯನ್ನು ಖರೀದಿಮಾಡಿದ್ದಾರೆ.
ಸಲೀಂ ಅವರು ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದು ತನ್ನ ಗಂಡನ ಉದ್ಯೋಗಕ್ಕೆ ನೆರವಾಗಲು ಸ್ಕೂಟಿಯನ್ನು ಖರೀದಿ ಮಾಡಿದ್ದಾರೆ.
ಶಾಸಕರಿಂದ ಸನ್ಮಾನ
ಸಲೀಂ ಅವರು ತನ್ನ ಪತ್ನಿ ನೀಡಿದ ಸ್ಕೂಟರ್ ನೊಂದಿಗೆ ಶಾಸಕರನ್ನು ಭೇಟಿಯಾಗಿ ಸರಕಾರದ ಗೃಹಲಕ್ಷ್ಮೀ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ.ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ ಸರಕಾರಕ್ಕೆ ಹಾಗೂ ಶಾಸಕರಿಗೆ ಸಲೀಂ ಅವರು ಅಭಿನಂದನೆ ಸಲ್ಲಿಸಿದರು. ಶಾಸಕರು ಸಲೀಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಆರ್ಥಿಕ ನೆರವು ಗೃಹಲಕ್ಷ್ಮಿ…!!!
ತನ್ನ ಸ್ಕೂಟರಲ್ಲಿಸಲೀಂ ರವರು ಆರ್ಥಿಕ ನೆರವು ಗೃಹಲಕ್ಷ್ಮಿ ಎಂಬ ನಾಮಫಲಕವನ್ನು ಹಾಕಿದ್ದು ಇದರಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮರ್, ಲಕ್ಣ್ಮೀಹೆಬ್ಬಾಲ್ಕರ್ ಹಾಗೂ ಶಾಸಕ ಅಶೋಕ್ ರೈ ಫೊಟೋ ಹಾಕಿದ್ದಾರೆ.