ಮಂಗಳೂರು: ಮಗುವಿನ ಜೊತೆ ವ್ಯಕ್ತಿಯೋರ್ವರು ನದಿಗೆ ಹಾರಲು ಯತ್ನಿಸಿದ ಘಟನೆ ಗುರುಪುರದಲ್ಲಿ ನಡೆದಿದೆ.
ಪತ್ನಿಯ ಜೊತೆಗಿನ ಕೌಟುಂಬಿಕ ಕಲಹ ದಿಂದ ಬೇಸತ್ತ ವ್ಯಕ್ತಿ ಮಗುವಿನ ಜೊತೆಗೆ ನದಿಗೆ ಹಾರಲು ಬಂದಿದ್ದಾನೆ.
ಜನ ಸಂಚಾರ ಕಡಿಮೆ ಇದ್ದ ಸಂದರ್ಭ ಮಗುವನ್ನು ಎತ್ತಿಕೊಂಡು ನದಿಗೆ ಹಾರಲು ಮುಂದಾಗಿದ್ದಾನೆ. ಇದನ್ನು ನೋಡಿದ ಅಲ್ಲೆ ಇದ್ದ ಮುಸ್ಲಿಂ ಯುವಕರ ತಂಡ ಆತನನ್ನು ಹಿಡಿದೆಳೆದು ಜೀವ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.