ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಶ್ರಯದಲ್ಲಿ, ಎ. ಜೆ. ಇನ್ಸ್ ಟ್ಯೂಷನ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮವು ನ.10 ರoದು ಶ್ರೀ ರಾಮ ಭಜನಾ ಮಂದಿರದ ಸಭಾಂಗಣ ಕುಂಬ್ರ ದಲ್ಲಿ ನಡೆಯಿತು.
ಮೊದಲಿಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕುಂಬ್ರ ಇಲ್ಲಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಬಿ. ಆರ್. ರವರು ಮಾತನಾಡಿ ಸ್ಪಂದನ ಸಂಸ್ಥೆ ಯ ಉತ್ತಮ ಸೇವೆ ಇದಾಗಿದ್ದು ಯಾವುದೇ ಪ್ರಚಾರವನ್ನು ಬಯಸದೆ ಸಮಾಜ ಸೇವೆ ಮಾಡುವ ಈ ಸಂಸ್ಥೆಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸ್ಪಂದನ ಸೇವಾ ಬಳಗದ ಅಧ್ಯಕ್ಷರಾದ ರತನ್ ರೈ ಕುಂಬ್ರ ವಹಿಸಿದ್ದರು.ಮುಖ್ಯ ಅತಿಥಿ ಶ್ರೀ ರಾಮ ಭಜನಾ ಮಂದಿರ ರಿ ಕುಂಬ್ರ ಇಲ್ಲಿನ ಅಧ್ಯಕ್ಷರಾದ ಮೋನಪ್ಪ ಪೂಜಾರಿ ಬಡಕ್ಕೋಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸ್ಪಂದನ ಸೇವಾ ಬಳಗದ ಗೌರವಧ್ಯಕ್ಷರಾದ ಮೋಹನ್ ದಾಸ್ ರೈ ಕುಂಬ್ರ ಸ್ಪಂದನ ಸೇವಾ ಬಳಗದ ಗೌರವ ಸಲಹೆಗಾರರಾದ ಸುಧಾಕರ ರೈ ಕುಂಬ್ರ
ಸ್ಪಂದನ ಸೇವಾ ಬಳಗದ ಕಾರ್ಯಧ್ಯಕ್ಷರಾದ ಅಶೋಕ್ ತ್ಯಾಗರಾಜೆ ಉಪಸ್ಥಿತರಿದ್ದರು.
ಉಷಾ ನಾರಾಯಣ ಕುಂಬ್ರ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನೆರವೇರಿತು.ಸ್ಪಂದನ ಸೇವಾ ಬಳಗದ ಗೌರವ ಸಲಹೆಗಾರರಾದ ತಿಲಕ್ ರೈ ಕುತ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ರತನ್ ರೈ ಕುಂಬ್ರ ಸ್ವಾಗತಿಸಿ ಅಶೋಕ್ ತ್ಯಾಗರಾಜೆ ವಂದಿಸಿದರು.
ವಿದ್ಯಾಲತಾ ರೈ ಕುಂಬ್ರ, ರಾಜೇಶ್ ರೈ ಪರ್ಪುoಜ, ಪದ್ಮನಾಭ ಗೌಡ ಮುಂಡಾಲ, ನಿತೀಶ್ ಕುಮಾರ್ ಶಾಂತಿವನ, ಕರುಣಾ ರೈ ಬಿಜಳ, ಚಂದ್ರಕಾಂತ ಶಾಂತಿವನ ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶರತ್ ಕುಮಾರ್ ಗುತ್ತು, ಸಂತೋಷ್ ಕುಮಾರ್ ರೈ ಕೈಕಾರ ಸಹಕರಿಸಿದರು.
ಶಿಬಿರದಲ್ಲಿ ಸುಮಾರು 450ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಾಲ್ಗೊಂಡರು 150 ಕ್ಕೂ ಹೆಚ್ಚು ಜನರಿಗೆ ಕನ್ನಡಕ ವಿತರಿಸಲಾಯಿತು.50 ಕ್ಕೂ ಅಧಿಕ ಮಂದಿ ಅಂಚೆ ಇಲಾಖೆಯ ಅಪಘಾತ ವಿಮೆ ಮಾಡಿಸಿಕೊಂಡರು ಅಯುಷ್ಮಾನ್ ಕಾರ್ಡ್ ನ ಪ್ರಯೋಜನ ಕೂಡ ಪಡೆದುಕೊಂಡರು. ಸ್ಪಂದನ ಸೇವಾ ಬಳಗದ ಗೌರವಧ್ಯಕ್ಷರಾದ ಸುಧಾಕರ ರೈ ಕುಂಬ್ರ ಉಚಿತವಾಗಿ ಕನ್ನಡಕದ ವ್ಯವಸ್ಥೆಯನ್ನು ಮಾಡಿದರು.