ಮಂಗಳೂರು: ದೇವಸ್ಥಾನ ಕ್ಕೆಂದು ಮನೆಯಿಂದ ಹೋಗಿದ್ದ ಆಕಾಶಭವನ ಮುಲ್ಲಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ (34) ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಇವರು 6 ತಿಂಗಳುಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನ.10ರಂದು ಬೆಳಗ್ಗೆ 10.30ಕ್ಕೆ ಕಟೀಲು ದೇವಸ್ಥಾನಕ್ಕೆಂದು ಹೋಗಿದ್ದು, ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದಾರೆ. ಬಿಳಿಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಾವೂರು ಪೊಲೀಸ್ ಠಾಣೆ(0824-2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.