ಹೊಸ ಕಾರು ಖರೀದಿ ಮಾಡೋದು ಅಂದ್ರೆ ಸಾಮಾನ್ಯವಾದ ಮಾತಲ್ಲ. ಅದು ಕೂಡ ದುಬಾರಿ ಬೆಲೆಯ ಕಾರು ಖರೀದಿ ಮಾಡಬೇಕು ಅಂದ್ರೆ ಒಂದು ಆಗರ್ಭ ಶ್ರೀಮಂತ ಆಗಿಬೇಕು. ಇಲ್ಲವೇ ತನ್ನ ಅರ್ಧ ಜೀವನವನ್ನೇ ಅದಕ್ಕಾಗಿ ಮುಡಿಪಾಗಿ ಇಡಬೇಕು ಅಷ್ಟೇ. ಹೀಗೆ ಕಳೆದ ನವೆಂಬರ್ 12ರಂದು ಮಧ್ಯರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಸಖತ್ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ವಿಪರಿತ ಕುಡಿದು ವಾಹನ ಚಲಿಸಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ವಾಹನ ಕಾಯಿದೆಯಡಿಯಲ್ಲಿ ಕುಡಿದು ವಾಹನ ಚಲಾಯಿಸುವುದು ಅಥವಾ ಚಾಲನೆ ಮಾಡುವುದು (ಡಿಯುಐ) ಕ್ರಿಮಿನಲ್ ಅಪರಾಧವಾಗಿದೆ. ಆದರೆ ಇನ್ನೂ ಮೀಸೆ ಚಿಗುರದ ಯುವಕರು ಕುಡಿದು ವಾಹನ ಚಲಾಯಿಸಿ ಸಾವಿನ ಮನೆ ಸೇರಿದ್ದಾರೆ.
ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಓವರ್ ಸ್ಪೀಡ್ನಲ್ಲಿ ಬರುತ್ತಿದ್ದ ಕಾರು ಟ್ರಕ್ಗೆ ಡಿಕ್ಕಿಯಾಗಿದ್ದು, 6 ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಟ್ರಕ್ಗೆ, 100 ಕಿ.ಮೀ ಸ್ಪೀಡ್ನಲ್ಲಿ ಬಂದ ಟೊಯೋಟಾ ಇನ್ನೋವಾ ಗುದ್ದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ, ಕಾರು, ಟ್ರಕ್ಗೆ ಗುದ್ದಿದ ರಭಸಕ್ಕೆ ಕಾರಿನ ರೂಫ್ ಟಾಪ್ ಕಿತ್ತುಕೊಂಡು ಆಕಾಶದೆತ್ತರಕ್ಕೆ ಹಾರಿ ಹೋಗಿದೆ. ಕಾರು ನುಜ್ಜುಗುಜ್ಜಾಗುವ ಜೊತೆಗೆ ಕಾರಿನಲ್ಲಿದ್ದವರ ದೇಹ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದಿದೆ.
ಈ ಅಪಘಾತದಲ್ಲಿ ಮೃತಪಟ್ಟವರನ್ನ ಹಿಮಾಚಲ ಪ್ರದೇಶದ 23 ವರ್ಷದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಉಳಿದವರು ಡೆಹ್ರಾಡೂನ್ ಮೂಲದ ಅತುಲ್ ಅಗರವಾಲ್ (24), ರಿಷಭ್ ಜೈನ್ (24), ನವ್ಯಾ ಗೋಯೆಲ್ (23) ಕಾಮಾಕ್ಷಿ (20) ಮತ್ತು ಗುನೀತ್ (19) ಎಂದು ಗುರುತಿಸಲಾಗಿದೆ. 25 ವರ್ಷದ ಸಿದ್ದೇಶ್ ಅಗರ್ವಾಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಟೊಯೊಟಾ ಇನ್ನೋವಾ ಕಾರನ್ನು ಸಿದ್ದೇಶ್ ಅಗರ್ವಾಲ್ ಎಂಬಾತ ಖರೀದಿ ಮಾಡಿದ್ದ. ಹೊಚ್ಚ ಹೊಸ ಟೊಯೊಟಾ ಇನ್ನೋವಾ ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿದ್ದ ಸಿದ್ದೇಶ್ ಆತನ ಸ್ನೇಹಿತರಿಗೆ ಪಾರ್ಟಿ ಕೊಡಸಲೇಂದು ಕರೆದಿದ್ದ. ಇನ್ನೂ ಹೊಸ ಕಾರಿಗೆ ನಂಬರ್ ಪ್ಲೇಟ್ ಕೂಡ ಹಾಕಿರಲಿಲ್ಲ.
ಹೀಗೆ ಹೊಸ ಕಾರು ಖರೀದಿ ಮಾಡಿದ್ದ ಖುಷಿಯಲ್ಲಿ ಒಟ್ಟು 7 ಸ್ನೇಹಿತರು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಬಳಿಕ ಅದೇ ಕಾರಿನಲ್ಲಿ 7 ಮಂದಿ ಪ್ರಯಾಣ ಬೆಳೆಸಿದ್ದಾರೆ. ಆಗ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಹೋಗುತ್ತಿತ್ತು. ಹೀಗೆ ಅತೀ ವೇಗವಾಗಿ ನಗರದ ಒಎನ್ ಜಿಸಿ ಚೌಕ್ನಲ್ಲಿ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ರಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ದುದುರ್ಮರಣ ಹೊಂದಿದ್ದಾರೆ. ಸದ್ಯ ಕಾರು ಮಾಲೀಕ ಸಿದ್ದೇಶ್ ಅಗರ್ವಾಲ್ ಮಾತ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.