ಪುತ್ತೂರು: ಮಹಡಿ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಪುತ್ತೂರು ಕಲ್ಲಾರೆ ನಿವಾಸಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ನಿಶ್ಮಾ (17) ಎಂದು ಗುರುತಿಸಲಾಗಿದೆ.
ಮೃತರು ತಂದೆ ಪುತ್ತೂರು ಕಮ್ಯುನಿಟಿ ಸೆಂಟರ್ ನ ಸ್ಥಾಪಕ ಹನೀಫ್ ಪುತ್ತೂರು, ತಾಯಿ ಹಾಗು ಕುಟುಂಬಸ್ಥರನ್ನು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.