ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 29 ಹೊಸ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಕೆಲವೊಂದು ಕಡೆ ಕಾಮಗಾರಿ ಪೂರ್ಣಗೊಂಡಿದ್ದು ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ರಿಕ್ಷಾ ಪಾರ್ಕಿಂಗ್ ಸ್ಥಳಕ್ಕ ಶಾಸಕರ ನಿಧಿಯಿಂದ ಬಿಡುಗಡೆಯಾಗಿರುವ ಸುಮಾರು 2.50 ಲಕ್ಷ ಅನುದಾನದಲ್ಲಿ ಇಂಟರ್ ಲಾಕ್ ಅಳವಡಿಕೆಗೆ ಶಲಾನ್ಯಾಸ ನೆರವೇರಿಸಿ ಮಾತನಾಡಿದರು.ರಿಕ್ಷಾ ಚಾಲಕರು ಕಷ್ಟದ ಜೀವನ ನಡೆಸುವವರು, ಅವರು ಕೂಡಾ ನೆರಳಿನಲ್ಲಿ ನಿಂತುಕೊಳ್ಳಬೇಕಾದರೆ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕು. ದಿನದ 18 ಗಂಟೆ ತನ್ನ ಕುಟು0ಬಕ್ಕೋಸ್ಕರ ಕೆಲಸ ಮಾಡುವ ಬಡ ರಿಕ್ಷಾ ಚಾಲಕರನ್ನು ಗುರುತಿಸಿ ಅವರಿಗೆ ವ್ಯವಸ್ಥೆ ಮಾಡುವವರ ಸಂಖ್ಯೆ ಕಡಿಮೆ ಈ ನಿಟ್ಟಿನಲ್ಲಿ ತನ್ನ ಕ್ಷೇತ್ರದ ರಿಕ್ಷಾ ಚಾಲಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬ ಉದ್ದೇಶದಿಂದ ರಿಕ್ಷಾ ತಂಗುದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

ಎಲ್ಲಾ ವರ್ಗಕ್ಕೂ ನೆರವು: ಕೆ ಪಿ ಆಳ್ವ : ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ ಬಸ್ ನಿಲ್ದಾಣದ ಚಾಲಕರ ಬೇಡಿಕೆ ಈಡೇರಿಸಲಾಗಿದೆ. ಪಕ್ಕದಲ್ಲಿ ಕಟ್ಟಡ ಇರುವ ಕಾರಣ ತಂಗುದಾಣದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ರಿಕ್ಷಾ ಚಾಲಕರ ನೋವುಗಳಿಗೆ ಸ್ಪಂದನೆ ನೀಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದು, ಚಾಲಕರು ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಬೇಕು ಮತ್ತು ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಸಕರು ರಿಕ್ಷಾ ತಂಗುದಾಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ರಾಬಿನ್ ತಾವೋ, ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಸುಪ್ರಿತ್ ಕನ್ನಾರಾಯ, ಕಾಂಗ್ರೆಸ್ ಮುಖಂಡರಾದ ದಾಮೋಧರ್ ಭಂಡಾರ್ಕರ್ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನಯನಾ ನೆಲ್ಲಿಕಟ್ಟೆ, ಸತೀಶ್ ರೈ ನಿಡ್ನಳ್ಳಿ, ಸಂತೋಷ್ ನೆಹರೂನಗರ ಸ್ಥಳೀಯ ರಿಕ್ಷಾ ಚಾಲಕ, ಮಾಲಕರು ಉಪಸ್ತಿತರಿದ್ದರು.

























