ರಸ್ತೆ ಬದಿ ಎಸೆದು ಹೋಗಿಲ್ಲ-ಮಾನವೀಯತೆ ಮೆರೆದಿದ್ದೇವೆ:
ಪುತ್ತೂರು: ಸಾಲ್ಮರ ಕೆರೆಮೂಲೆ ಘಟನೆಗೆ ಸಂಬಂಧಿಸಿ ಆರೋಪ ಹೊತ್ತಿರುವ ಹೆನ್ರಿ ತಾವೋ ಅವರ ಪುತ್ರ ಕಿರಣ್ ಅವರು ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಮಿಲ್‌ನಲ್ಲಿ ತುಂಬಾ ವರ್ಕ್ ಲೋಡ್ ಜಾಸ್ತಿ ಇತ್ತು. ಆಗ ಹೊರಗಡೆಯಿಂದ ಇಬ್ಬರನ್ನು ಕರೆಸಿಕೊಂಡಿದ್ದೇವೆ. ಅದರಲ್ಲಿ ಒಬ್ಬರು ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದವರು. ಅವರ ಕೆಳಗೆ ಶಿವಪ್ಪರವರು ಕೆಲಸ ಮಾಡಿಕೊಂಡಿದ್ದು, ಡ್ಯಾಮ್ ವರ್ಕ್ ಗೆ ಹಲಗೆಗಳನ್ನು ಕೊಂಡೊಯ್ದು ಒಂದು ಜಾಗದಲ್ಲಿ ಅನ್‌ಲೋಡ್ ಆಗಿ ಇನ್ನೊಂದು ಜಾಗಕ್ಕೆ ಹೋದಾಗ ಶಿವಪ್ಪ ಅವರು ಅಸ್ವಸ್ಥಗೊಂಡು ವಾಹನದ ಹಿಂದೆ ಮಲಗಿದ್ದರು.
ಆಗ ನಾವು ನೀರು ಕೊಟ್ಟು ಎಬ್ಬಿಸಲು ಪ್ರಯತ್ನಿಸಿದ್ದೇವೆ. ಅಲ್ಲಿಂದ ನೇರ ಶಿವಪ್ಪ ಅವರ ಮನೆಗೆ ಬಂದು ಮನೆಯವರಿಗೆ ವಿಷಯ ತಿಳಿಸಿ ಅದೇ ದಾರಿಯಲ್ಲಿ ಹೋಗುವ ರಿಕ್ಷಾವನ್ನು ನಿಲ್ಲಿಸಿ ಅದರಲ್ಲಿ ಶಿವಪ್ಪ ಅವರನ್ನು ಕೂತ್ಕಳಿಸಿ ಬಳಿಕ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನೆಯವರಿಗೆ ತಿಳಿಸಿದ್ದೇವೆ.
ಈ ನಡುವೆ ನನ್ನ ತಂದೆ ನೇರ ಪೊಲೀಸ್ ಸ್ಟೇಷನ್‌ಗೆ ಹೋಗಿ ನಡೆದ ಘಟನೆಯ ಕುರಿತು ಲಿಖಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಲ್ಲಿ ಪೊಲೀಸರು, ನೀವು ಇನ್ನು ಹೋಗಿ, ಮತ್ತೆ ಕರೀತೇವೆ ಎಂದು ಹೇಳಿ ಕಳುಹಿಸಿದ್ದಾರೆ.
ಸಂಜೆ ವೇಳೆ ಮತ್ತೆ ಶಿವಪ್ಪ ಅವರ ಮನೆ ಮಂದಿ ಸೇರಿಕೊಂಡು ತಂದೆಯ ಮೇಲೆ ಆರೋಪ ಮಾಡಿದ್ದಾರೆ.ಆದರೆ, ನಮಗೂ ಮನುಷ್ಯತ್ವ ಇದೆ. ನನ್ನ ತಂದೆ ಎಲ್ಲಿಯೂ ದಾರಿಯಲ್ಲಿ ಬಿಟ್ಟು ಹೋಗಿಲ್ಲ.ಎಲ್ಲಾ ಮಾಹಿತಿ ನೀಡಿ ಹೋಗಿದ್ದಾರೆ. ಆದರೆ ರಾತ್ರಿ ವೇಳೆ ಪೊಲೀಸರು ನಮ್ಮ ಮನೆಗೆ ಬಂದು ಹೋಗಿದ್ದಾರೆ. ನನ್ನ ತಂದೆ ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ.
ಒಟ್ಟಿನಲ್ಲಿ ನಾವು ಮನುಷ್ಯತ್ವದ ರೀತಿಯಲ್ಲಿನಡೆದುಕೊಂಡಿದ್ದೇವೆ. ಅನಾರೋಗ್ಯಕ್ಕೀಡಾದ ಶಿವಪ್ಪ ಅವರ ಕುರಿತು ಅವರ ಮನೆ ಮಂದಿಗೆ ತಂದೆಯವರು ತಿಳಿಸಿಯೇ ಹೋಗಿದ್ದಾರೆ.ಎಲ್ಲೂ ಕೆಲವು ಆರೋಪ ಬಂದಂತೆ, ರಸ್ತೆ ಬದಿ ಎಸೆದು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.