ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ಶಿಕ್ಷಕನೋರ್ವ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ನಿಂಧಿಸಿ ಪೋಸ್ಟ್ ಹಾಕಿದ್ದು ಆತನ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಹರಿಪ್ರಸಾದ್ ಎಂಬ ಶಿಕ್ಷಕ ಈ ಕೃತ್ಯ ಎಸಗಿದ್ದು ಓರ್ವ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಮಾಡಬೇಕಾದವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ತಾಣದಲ್ಲಿ ಸರಕಾರವನ್ನು ಟೀಕಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಸರಕಾರದಿಂದ ಸಂಬಳ ಪಡೆದು ಅದೇ ಸರಕಾರದ ವಿರುದ್ದ ಮಾತನಾಡುವ ಸರಕಾರಿ ನೌಕರ ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹನಲ್ಲ ಎಂದು ದೂರಿನಲ್ಲಿ ತಿಳಿಸಿದ್ದು ಶಿಕ್ಷಕನನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದ್ದಾರೆ.
ಸರಕಾರಿ ನೌಕರರು ಯಾರೇ ಆಗಲಿ ಯಾವುದೇ ಸಚುವರನ್ನಾಗಲಿ, ಶಾಸಕ,ಸಂಸದರನ್ನಾಗಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾರನ್ನೂ ಟೀಕಿಸಬಾರದು ಮತ್ತು ಅವಹೇಳಿಸಬಾರದು ಇದು ಖಂಡನೀಯವಾಗಿದೆ.
ರಾಜಕೀಯ ದುರುದ್ದೇಶದಿಂದ ಕೃತ್ಯ ಎಸಗಿದ ಶಿಕ್ಷಕನನ್ನು ಅಮಾನತು ಮಾಡಬೇಕು ಇಲ್ಲವಾದರೆ ಶಾಸಕರ ಮೂಲಕ ಸರಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ಕಾವು ಹೇಮನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.