ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 18 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಗತಿ ವೈಭವ-2024 ಇಲ್ಲಿನ ಪುರಭವನದಲ್ಲಿ ನವೆಂಬರ್ 17 ರಂದು ನಡೆಯಿತು.
ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕರಾದ ಶ್ರೀಯುತ ಗೋಕುಲ್‌ನಾಥ್ ಪಿ.ವಿ. ಅವರ ತಾಯಿ ದಿ|ಪಿ.ವಿ. ಸಾವಿತ್ರಿ ಮತ್ತು ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅವರ ಸಹೋದರ ಕೆ. ವಿನೋದ್ ಕುಮಾರ್ ಅವರ ಆಶೀರ್ವಾದ ಮಾರ್ಗದರ್ಶನ ಮತ್ತು ಸಹಾಯದಿಂದ ಪ್ರಾರಂಭಗೊoಡಿರುವ ಪ್ರಗತಿ ಸ್ಟಡಿ ಸೆಂಟರ್ 17 ಸಂವತ್ಸರಗಳನ್ನು ಪೂರೈಸಿ 18ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಕಾರ್ಯಕ್ರಮವನ್ನು ಮುಗ್ಧ ಪುಟಾಣಿ ಮಕ್ಕಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ವಹಿಸಿದ್ದರು. ಇವರು ಮಾತನಾಡುತ್ತಾ ಪ್ರಗತಿ ಸಂಸ್ಥೆಯು ಹಲವಾರು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರಗತಿಯು ಹಲವಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾದ ಸುದ್ದಿ ಪತ್ರಿಕೆಯ ಕರ‍್ಯನಿರ್ವಹಣಾಧಿಕಾರಿಯಾದ ಸೃಜನ್ ಊರುಬೈಲು ಇವರು ಮಾತನಾಡುತ್ತಾ ಪ್ರಗತಿಯ ವಿದ್ಯಾರ್ಥಿಗಳಿಗೆ ಬಹಳ ಶಿಸ್ತಿನಿಂದ ಇದ್ದು ಪ್ರಗತಿ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮವು ಯಶಸ್ಸು ಕಾಣಲಿ, ವರ್ಷದಿಂದ ವರ್ಷಕ್ಕೆ ಬೆಳೆಯಲಿ ಎಂದು ಹಾರೈಸಿದರು. ಅಲ್ಲದೆ ಸ್ಪರ್ಧೆಯ ತೀರ್ಪೂಗಾರರಾಗಿ ನಾರಾಯಣ ರೈ ಕುಕ್ಕುವಳ್ಳಿ, ತಾರನಾಥ ಸವಣೂರು, ವಿದೂಷಿ ಪವಿತ್ರ ರೂಪೇಶ್, ರವಿ ಪಾಂಬಾರು ಹಾಗೂ ಜಗನ್ನಾಥ ಅರಿಯಡ್ಕ ಇವರೆಲ್ಲರೂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ| ಮೇಘ ಗೋಕುಲ್‌ನಾಥ್ ಇವರಿಗೆ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರಿಂದ ಸನ್ಮಾನಿಸಲಾಯಿತು. ಸನ್ಮಾನಿತರು ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ.ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್ ದಂಪತಿಗಳ ಪುತ್ರಿಯಾದ ಡಾ| ಮೇಘಗೋಕುಲ್ ಇವರನ್ನು ಇತ್ತೀಚೆಗೆ ಪಡೆದ Ph.d ಪದವಿಗಾಗಿ ಸಂಸ್ಥೆಯ ಉಪನ್ಯಾಸಕರ ವತಿಯಿಂದ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಇವರಿಂದ ಸನ್ಮಾನಿಸಲಾಯಿತು. ಇವರು ತನ್ನ ಸಾಧನೆಗೆ ಸಹಕರಿಸಿ ಹೆತ್ತವರನ್ನು ಸ್ಮರಿಸುವ ಜೊತೆಗೆ ತನ್ನಿಂದ ಆದಷ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅದರಲ್ಲೂ ಅಂದ ಹಾಗೂ ಬುದ್ಧಿ ಮಾಂಧ್ಯರಿಗೆ ಸೇವೆ ಸಲ್ಲಿಸಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.
ಬಳಿಕ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ದೇಶಭಕ್ತಿ ಗೀತೆ ಸಮೂಹ, ದೇಶಭಕ್ತಿ ನೃತ್ಯ ರೂಪಕ, ಜಾನಪದ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತ್ತು. ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸ್ಪರ್ಧೆಯ ವಿಜೇತರ ವಿವರ:
ಪ್ರಗತಿ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ:- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ (ಪ್ರಥಮ), ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ (ದ್ವಿತೀಯ)
ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ (ಪ್ರಥಮ), ಸರಸ್ವತಿ ವಿದ್ಯಾಮಂದಿರ ನರಿಮೊಗರು (ದ್ವಿತೀಯ)
ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ದರ್ಬೆ ಪುತ್ತೂರು, ಬಹುಮಾನ ಪಡೆದರು. ವಿಜೇತ ತಂಡಗಳಿಗೆ ಟ್ರೋಫಿ ಪ್ರಮಾಣ ಪತ್ರವನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ನಾರಾಯಣ ರೈ ಕುಕ್ಕುವಳ್ಳಿ, ತಾರಾನಾಥ ಸವಣೂರು, ರವಿ ಪಾಂಬಾರು, ಜಗನ್ನಾಥ ಅರಿಯಡ್ಕ ಹಾಗೂ ಪವಿತ್ರ ರೂಪೇಶ್ ಇವರು ತೀರ್ಪುಗಾರರಾಗಿ ಸಹಕರಿಸಿದರು.
“ಕತ್ತಲಿನಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಸಂಸ್ಥೆ ಈ ಪ್ರಗತಿ ವಿದ್ಯಾ ಸಂಸ್ಥೆ.”
ಮಾಜಿ ಬಿಜೆಪಿ ರಾಜಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಭೂತ ಕಾಲದ ಕತ್ತಲಲ್ಲಿ ಬೆಳಕನ್ನು ಹುಡುಕುವುದಕ್ಕಿಂತ ಭವಿಷ್ಯತ್ ಕಾಲದ ಕತ್ತಲಿನಲ್ಲಿ ಬೆಳಕನ್ನು ಮಾಡುವವ ಸಾಧಕ. ಈ ಗೋಕುಲ್‌ನಾಥ್ ಕತ್ತಲಿನಲ್ಲಿರುವ ಅದೆಷ್ಟು ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕನ್ನು ನೀಡುವ ಕೆಲಸವನ್ನು ಈ ಪ್ರಗತಿ ಸಂಸ್ಥೆ ಮಾಡುತ್ತಿದೆ. ಈ ಸಾಧನೆಗಾಗಿ ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಹಾಗೂ ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌ನಾಥ್ ಇವರಿಗೆ ಅಭಿನಂದನೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ… ಆದುದರಿಂದ ಶಿಕ್ಷಣಕ್ಕೆ ಕೊರತೆ ಇಲ್ಲ ಆದರೆ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಮುಂದಕ್ಕೆ ತರುವಂತಹ ಇಂತಹ ಸಂಸ್ಥೆಯ ಅವಶ್ಯಕತೆ ಇದೆ ಎಂದು ಹೇಳಿದರು.
ವಿವೇಕಾನಂದ ಬಿ.ಎಡ್ ಕಾಲೇಜು ತೆಂಕಿಲ ಪುತ್ತೂರು ಇದರ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತೀಶ್ ರಾವ್ ಇವರು ಮಾತನಾಡುತ್ತ ನಿರ್ದಿಷ್ಟವಾದ ಕರ‍್ಯಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರದ್ದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುವ ಸಜ್ಜನರು, ಹಿರಿಯರು ಸಾಧಕರಿಂದ ಕೂಡಿದ ಕರ‍್ಯಕ್ರಮವನ್ನು ಆಯೋಜಿಸಿದ ಪ್ರಗತಿ ಸಂಸ್ಥೆಯ ಸಂಚಾಲಕರು ಹಾಗೂ ಪ್ರಾಂಶುಪಾಲರಿಗೆ ಅಭಿವಂದನೆ ಸಲ್ಲಿಸಿದರು. ಮಕ್ಕಳನ್ನು ನಾವು ಹೂವಿನಂತೆ ಕಾಣಬೇಕು. ಹೀಗೆ ಪ್ರತಿ ಹೂ ವಿಭಿನ್ನವಾಗಿರುತ್ತದೆಯೋ ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ವಿಶೇಷತೆ ಇರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಧರ‍್ಯವನ್ನು ನೀಡುವುದೇ ಶಿಕ್ಷಣ-ಆಶಾ.
ವಿವೇಕಾನಂದ ಪ್ರೌಢಶಾಲೆ ತೆಂಕಿಲ ಪುತ್ತೂರು ಇದರ ಮುಖ್ಯೋಪಾಧ್ಯಯನಿಯಾದ ಶ್ರೀಮತಿ ಆಶಾ ಬೆಳ್ಳಾರೆ ಮಾತನಾಡುತ್ತಾ ವಿದ್ಯಾರ್ಥಿಗಳಗೆ ಧೈರ್ಯವನ್ನು ನೀಡುವುದೇ ಶಿಕ್ಷಣ. ವಿದ್ಯಾರ್ಥಿಗಳಿಗೆ ಗುರಿ, ಧ್ಯೇಯ, ಉದ್ದೇಶ ಎಲ್ಲವು ಒಂದೇ ಆಗಿರಬೇಕು. ಅದನ್ನು ತಲುಪುವ ಮಾರ್ಗ ಬೇರೆಯಾದರೂ ನಮ್ಮ ಉದ್ದೇಶ ಈಡೇರಬೇಕು. ಪ್ರಗತಿಯ ಮುಂದಿನ ಎಲ್ಲಾ ಕರ‍್ಯಗಳಿಗೆ ಮನಸ್ಸು, ಬುದ್ಧಿ, ದೇಹ ಇದರ ಸಮನ್ವಯ ಇರಲಿ ಎಂದು ಶುಭ ಹಾರೈಸಿದರು.
ಮೊಡಕವಿದ ವಾತಾವರಣ ಅನುಭವಿಸಿದ ವಿದ್ಯಾರ್ಥಿಗಳ ಬದುಕಿನಲ್ಲಿ ಆಶಾಕಿರಣ ಈ ಪ್ರಗತಿ ಸ್ಟಡಿ ಸೆಂಟರ್- ಸುದರ್ಶನ್ ಮೂಡಬಿದಿರೆ
ಭಾರತೀಯ ಜನತಾ ಪಾರ್ಟಿ ಇದರ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮಾಡಬಿದಿರೆ ಅವರು ಮಾತನಾಡುತ್ತಾ ೧೮ ವರ್ಷಗಳಿಂದ ವಿದ್ಯಾಭ್ಯಾಸದಲ್ಲಿ ಮೊಡಕವಿದ ವಾತಾವರಣ ಅನುಭವಿಸಿದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಕೆಲಸವನ್ನು ಪ್ರಗತಿ ಸ್ಟಡಿ ಸೆಂಟರ್ ಮಾಡುತ್ತಿದೆ. ಈ ಉತ್ತಮ ಕೆಲಸಕ್ಕಾಗಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದಕ್ಕೆ ಅಭಿವಂದನೆ ಸಲ್ಲಿಸಿದರು. ನಾವು ಯಾವುದೇ ಹಂತಕ್ಕೆ ತಲುಪಿದರು ನಮಗೆ ವಿದ್ಯೆ ನೀಡಿದ ಸಂಸ್ಥೆಯನ್ನು ಹಾಗೂ ಪೋಷಕರನ್ನು ಮರೆಯಬಾರದು ಎಂದು ಹೇಳಿದರು. ಇವತ್ತು ಪ್ರಗತಿಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರಿಗೆ ಆತ್ಮ ವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಿದೆ.
“ಪ್ರಗತಿಗೆ ಪ್ರಗತಿಯೇ ಸಾಟಿ”:- ನಾರಾಯಣ ರೈ ಕುಕ್ಕುವಳ್ಳಿ
ಸುದ್ದಿ ಬಿಡುಗಡೆಯ ಪ್ರತಿಭರಂಗ, ಅಂಕಣಕಾರ, ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರು, ನಿವೃತ್ತ ಶಿಕ್ಷಕರು ಆದ ನಾರಾಯಣ ರೈ ಕುಕ್ಕುವಳ್ಳಿ ಇವರು ಮಾತನಾಡುತ್ತ ಪ್ರಗತಿ ಎಂಬ ಸಂಸ್ಥೆಯು ವಿದ್ಯಾರ್ಥಿಗಳನ್ನು ಪ್ರತಿ ಕ್ಷಣ ಎಲ್ಲರನ್ನು ಗಮನಿಸಿ ಅವರ ಬದುಕಿನಲ್ಲಿ ತಿರುವು ನೀಡುವ ಸಂಸ್ಥೆಯೇ ಪ್ರಗತಿ ಸ್ಟಡಿ ಸೆಂಟರ್ ಇಲ್ಲಿ ಪ್ರತಿಭಾವಂತ ಉಪನ್ಯಾಸಕ ವೃಂದದವರಿದ್ದಾರೆ. ಅವರೆಲ್ಲರ ಮಾರ್ಗದರ್ಶನದಿಂದ ಇಂದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇವತ್ತು ಪ್ರಗತಿಯ ಚಿಂತನೆಗಳು ವಿಸ್ತಾರಗೊಂಡಿದೆ.
“ನೊoದ ಪೋಷಕರ ಬದುಕಿನ ಆಶಾಕಿರಣ”
ಪೋಷಕರ ಪರವಾಗಿ ಕೊಡಗಿನ ಕಾರಗುಂದ ನಿವಾಸಿಯಾಗಿರುವ ಶ್ರೀಮತಿ ಮಲ್ಲಿಗೆ ಇವರು ಮಾತನಾಡುತ್ತಾ ನೊಂದ ಪೋಷಕರ ಬದುಕಿನ ಆಶಾಕಿರಣ ಈ ಸಂಸ್ಥೆ. ನನ್ನ ಮಗ ೯ನೇ ತರಗತಿ ಅನುತ್ತೀರ್ಣಗೊಂಡು ಪ್ರಗತಿ ಸಂಸ್ಥೆಯಲ್ಲಿ ೧೦ನೇ ತರಗತಿ ವಿದ್ಯಾಭ್ಯಾಸ ಮಾಡಿ ಉತ್ತೀರ್ಣಗೊಂಡು ಇದೀಗ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನನ್ನ ಮಗನ ಶಿಕ್ಷಣಕ್ಕೆ ತಂದೆ ಹಾಗೂ ತಾಯಿಯ ಸ್ಥಾನದಲ್ಲಿ ನಿಂತು ಅವನಲ್ಲಿರುವ ತಪ್ಪುಗಳನ್ನು ಸರಿಪಡಿಸಿದ ಸಂಸ್ಥೆಯ ಮುಖ್ಯಸ್ಥರಿಗೆ ನಾವು ಜೀವನ ಪೂರ್ತಿ ಚಿರಋಣಿಗಳು ಎಂದು ಹೇಳಿದರು. ನಮ್ಮ ಪೋಷಕರಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಿವಾಸಿಯಾದ ಅನಿತಾ ಎಂ.ಜಿ. ಇವರು ಮಾತನಾಡುತ್ತಾ ನನ್ನ ಮಗ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಈ ಸಂಸ್ಥೆಗೆ ಬರುವಾಗ ಅಕ್ಷರ ಜ್ಞಾನವೇ ಇರಲಿಲ್ಲ. ಪ್ರತಿಷ್ಠಿತ ಶಾಲೆಯಲ್ಲಿ ಓದಿದರೂ ನನ್ನ ಮಗನಿಗೆ ಅಕ್ಷರ ಜ್ಞಾನವಿರಲಿಲ್ಲ ೮ನೇ ತರಗತಿಯ ತನಕ ಉತ್ತೀರ್ಣಗೊಳಿಸಿ ೯ನೇ ತರಗತಿಗೆ ದಾಖಲಾತಿ ನಿರಾಕರಿಸಿದ ಸಂದರ್ಭದಲ್ಲಿ ನಮ್ಮ ಮಗನಲ್ಲಿ ವಿಶ್ವಸವನ್ನು ತುಂಬಿ ಶಿಕ್ಷಣವನ್ನು ನೀಡಿದ ಸಂಸ್ಥೆ ಈ ಪ್ರಗತಿ. ಇಂದು ಎಲ್ಲ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾನೆ. ಈ ಸಂಸ್ಥೆಯ ಮುಖ್ಯಸ್ಥರು ಹಾಗೂ ಅಧ್ಯಾಪಕರ ಮೇಲಿನ ಗೌರವವು ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.
೨೦೧೧-೧೨ನೇ ಸಾಲಿನ ಹಿರಿಯ ವಿದ್ಯಾರ್ಥಿ ಅಬ್ದುಲ್ ಮಜೀದ್ ಇವರು ಮಾತನಾಡುತ್ತಾ ನಾನು ಇಂದು ಇಷ್ಟು ಸಾಧನೆ ಮಾಡಿರುವೆನು ಎಂದರೆ ಅದಕ್ಕೆ ಕಾರಣ ಈ ಪ್ರಗತಿ ಸ್ಟಡಿ ಸೆಂಟರ್. ಹೇಮಲತಾ ಮೇಡಂ ಒಬ್ಬ ತಾಯಿಯಂತೆ ನನ್ನ ತಪ್ಪುಗಳನ್ನು ತಿದ್ದಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ. ವಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ ಟ್ಯೂಟೋರಿಯಲ್ ಆಗಿ ಆರಂಭಗೊoಡ ಸಂಸ್ಥೆ ತದನಂತರ ಅಇಖಿ, ಓಇಇಖಿ ತರಗತಿಯ ಮೂಲಕ ಆರಂಭಗೊoಡು ನಂತರ ಟ್ಯೂಷನ್ ಬ್ಯಾಚ್, ಓಒಒS ತರಗತಿ ಹೀಗೆ ಹಲವಾರು ತರಗತಿಯ ಮೂಲಕ 1200 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಈ ಸಂಧರ್ಭದಲ್ಲಿ ಸಹಕರಿಸಿದ ಅರ್ತಿಕಜೆ ಗಣಪತಿ ಭಟ್, ವಿ.ವಿ. ಅರ್ತಿಕಜೆ, ಶೋಭಿತಾ ಸತೀಶ್ ರಾವ್, ಗಂಗಾಧರ್ ಬೆಳ್ಳಾರೆ, ಆಶಾ ಬೆಳ್ಳಾರೆ ಇವರನ್ನು ಸ್ಮರಿಸಿದರು. ಕರ‍್ಯಕ್ರಮದಲ್ಲಿ ವಿಶೇಷ ಕರ‍್ಯಕ್ರಮವನ್ನು ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇವರನ್ನು ಅಭಿನಂದಿಸಿದರು.
ಪ್ರಗತಿ ಸ್ಟಡಿ ಸೆಂಟರ್‌ನ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾತನಾಡಿ ಪುತ್ತೂರಿನ ಆಸುಪಾಸಿನ ಜನರು ಪ್ರಗತಿಯ ಫಲಿತಾಂಶಕ್ಕೆ ಕಾಯುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾಗಿ ಓದಿ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾದ ಪ್ರಸುತ್ತ ಬನ್ಸಿಕ್ ಕೊರಿಯನ್ ಕಂಪೆನಿ ಲಂಡನ್‌ನಲ್ಲಿ ಉದ್ಯೋಗಿಯಾಗಿರುವ ಅಬ್ದುಲ್ ಮಜೀದ್ ಆನಾಜೆ ಕೊಡಿಪ್ಪಾಡಿ, ನಿವೃತ್ತ ಶಿಕ್ಷಕರು, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿಭರಂಗದ ಅಂಕಣಕಾರರಾದ, ಪ್ರಧಾನ ಸಂಪಾದಕರು ಮಧುಪ್ರಪಂಚದ ನಾರಾಯಣ ರೈ ಕುಕ್ಕುವಳ್ಳಿ, ಪೋಷಕರ ಪರವಾಗಿ ಕೊಡಗಿನ ಕಾರಗುಂದ ನಿವಾಸಿಯಾಗಿರುವ ಪ್ರಸುತ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಿ.ಪಿ ಬಿದ್ದಪ್ಪ ಇವನ ಪೋಷಕರಾದ ಪವನ್ ಹಾಗೂ ಮಲ್ಲಿಗೆಯವರನ್ನು ಉತ್ತಮ ಪೋಷಕರು ಎಂಬುದಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶ್ರೀಮತಿ ಹೇಮಾವತಿ ಸುದರ್ಶನ್ ಮೂಡಬಿದಿರೆ ಅಧ್ಯಕ್ಷರು ಶ್ರೀ ಪ್ರಗತಿ ಎಜುಕೇಶನ್ ಫೌಂಡೇಶನ್ (ರಿ.) ಮೂಡಬಿದಿರೆ ಇವರು ಉಪಸ್ಥಿತರಿದ್ದರು.
202324ನೇ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಸಾಧನೆ ಗೈದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದಿಶಾ ಸಿ.ಇ, ಆಯುಷಾತ್ತುಲ್ ಮಿಸ್ರಿಯ, ಅಶ್ವಿಜ ಕೆ. ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಾದ ಪ್ರಣಾಮ್ ಕೆ.ಟಿ., ಫಾತಿಮತ್ ಫಾರಹ್ಹಾನ, ಐರಾ ಕನಾಮ್ ಅವರನ್ನು ನಾರಾಯಣ ರೈ ಕುಕ್ಕುವಳ್ಳಿ ಇವರ ವತಿಯಿಂದ ಅಭಿನಂಧಿಸಲಾಯಿತು. ಪ್ರಗತಿ ಎಜುಕೇಶನ್ ಫೌಂಡೇಶನ್‌ನ ೧೭ ವರ್ಷ ಸಾಗಿ ಬಂದ ಕುರಿತು ಪ್ರಗತಿ ಸ್ಟಡಿ ಸೆಂಟರ್‌ನ ಮುಖ್ಯಗುರು ಶ್ರೀಮತಿ ಪ್ರಮೀಳಾ ಎನ್.ಡಿ. ವಾರ್ಷಿಕ ವರದಿ ವಾಚಿಸಿದರು.
ಪ್ರಗತಿ ಸ್ಟಡಿ ಸೆಂಟರ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರಾದ ಸುಮಿತ್ರಾ ಪಿ., ಶುತಿ, ವಂದನ ಅತಿಥಿಗಳನ್ನು ಸ್ವಾಗತಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರಾದ ಸುಪ್ರೀತ, ಕೀರ್ತಿಕಾ, ಅಕ್ಷತಾ, ಕಲಾವತಿ, ಅಭಿಷೇಕ್ ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಉಪನ್ಯಾಸಕರಾದ ಸ್ನಿಗ್ಧ ಆಳ್ವ, ಪೂಜಾ, ದಿವ್ಯ, ಚೈತ್ರ, ಜಯಶ್ರೀ ನೆಟ್ಟಾರು, ಅರುಣ್ ಜೋಶ್ ಕರ‍್ಯಕ್ರಮಕ್ಕೆ ಸಹಕರಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಸಹೋದ್ಯೋಗಿಗಳು ಪ್ರಾರ್ಥಿಸಿದರು. ಅರ್ಥಶಾಸ್ತç ಉಪನ್ಯಾಸಕ ನಾಸಿರ್ ಇವರು ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕರಾದ ಸ್ಯೌಮ, ಹರ್ಷಿತಾ, ಮಾಧವಿ ಕರ‍್ಯಕ್ರಮ ನಿರೂಪಿಸಿದರು. ಗಣಿತಶಾಸ್ತç ಉಪನ್ಯಾಸಕಿ ಮಧುಶ್ರೀ ವಂದಿಸಿದರು. ಕರ‍್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.