ನೆಲಮಂಗಲ: ಸೋದರ ಮಾವನಿಂದಲೇ 16 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವಂತಹ ಘಟನೆ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ನೆಲಮಂಗಲ ಪೊಲೀಸರಿಂದ 30 ವರ್ಷದ ಸೋದರ ಮಾವನನ್ನು ಬಂಧಿಸಲಾಗಿದೆ. ಬಾಲಕಿ ತಾಯಿ ದೂರಿನ ಆಧಾರದ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಬಿಎನ್ಎಸ್ ಜೊತೆಗೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಯುವತಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗುತ್ತಿರಲಿಲ್ಲ. ಹೀಗಾಗಿ ಮಗಳನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಬಾಲಕಿಯನ್ನ ತಪಾಸಣೆ ಮಾಡಿದ ವೈದ್ಯೆ ಮಗಳು ಗರ್ಭಿಣಿಯಾಗಿರುವುದು ಹೇಳಿದ್ದಾರೆ. ವಿಷಯ ತಿಳಿದ ಬಾಲಕಿಯ ತಾಯಿಗೆ ಅಘಾತವಾಗಿದೆ.
ಸೆಪ್ಟೆಂಬರ್ನಲ್ಲಿ ಆರೋಪಿ ಸೋದರ ಮಾವ ಮನೆಗೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಲವಂತವಾಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಹಾಗಾಗಿ ಬಾಲಕಿ ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.