ಸುಬ್ರಹ್ಮಣ್ಯ: ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ನ.25ರಂದು ದೇವರಿಗೆ ವಿಶೇಷವಾಗಿ ಮಹಾರುದ್ರಯಾಗ ನಡೆಯಲಿದೆ.
ಈ ವಿಶೇಷ ಯಾಗದಲ್ಲಿ ಪುರೋಹಿತರದಿಂದ ಏಕಕಾಲದಲ್ಲಿ ಸಾಮೂಹಿಕವಾಗಿ 1333 ರುದ್ರ ಪಠಣವನ್ನು ಪಾರಾಯಣ ಮಾಡುವುದರೊಂದಿಗೆ ದೇವರಿಗೆ ಸಮರ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮುಂತಾದ ಸೇವೆಗಳನ್ನು ಸಮರ್ಪಿಸಲು ಭಕ್ತರಿಗೆ ಅವಕಾಶ ಇರುತ್ತದೆ.
ಈ ಯಾಗಕ್ಕೆ ವಸ್ತು ರೂಪದಲ್ಲಿ ಎಳ್ಳು, ಭತ್ತ. ತುಪ್ಪ ಅಥವಾ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಬಹುದು. ಮಹಾರುದ್ರ ಯಾಗದಲ್ಲಿ ಪ್ರಥಮವಾಗಿ ನೋಂದಾಯಿಸಿದ 1333 ಜನರಿಗೆ ಮಾತ್ರ ಅವಕಾಶವಿದೆ ಎಂದು ಕ್ಷೇತ್ರದ ವತಿಯಿಂದ ತಿಳಿಸಲಾಗಿದೆ.