ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ 76 ನೇ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರು ಜನಜಾಗೃತಿ ವೇದಿಕೆ ವತಿಯಿಂದ ಮಹಾಲಿಂಗೇಶ್ವರ ದೇವರಿಗೆ ಏಕದಶ ರುದ್ರಾಭಿಷೇಕ ಸೇವೆಯನ್ನು ಮಾಡಿಸಿ ಪೂಜ್ಯರಿಗೆ ಶ್ರೀ ದೇವರು ದೀಘಾ೯ಯುಷ್ಯ ಕರುಣಿಸಿ ಪೂಜ್ಯರ ಆರೋಗ್ಯ, ಸಾಮಾಜಿಕ, ಸ್ವ-ಉದ್ಯೋಗ, ಧಾರ್ಮಿಕ, ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಮೂಲಕ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಲಕ್ಷಾಂತರ ಮಂದಿಯ ಜೀವನಕ್ಕೆ ಬೆಳಕು ನೀಡುವ ಶಕ್ತಿಯನ್ನು ಇನ್ನಷ್ಟು ಮಹಾಲಿಂಗೇಶ್ವರ ದೇವರು ಕರುಣಿಸಲಿ ಎಂದು ಸಂಕಲ್ಪ ಮಾಡಿ ಪೂಜೆ ಮಾಡಿಸಲಾಯಿತು.
ನಂತರ ಪೂಜ್ಯರಿಗೆ ಶ್ರೀ ದೇವರ ಪ್ರಸಾದವನ್ನು ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷರಾದ ಲೇಕೇಶ್ ಹೆಗ್ಡೆ, ಮಾಜಿ ತಾಲೂಕು ಅಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ಬನ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಕಾಂಗ್ರೇಸ್ ಮುಖಂಡರಾದ ಪಂಜಿಗುಡ್ಡೆ ಈಶ್ವರ ಭಟ್, ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಹಾಗೂ ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್ ಎಂ ಉಸ್ಥಿತರಿದ್ದರು.



























