ಪುತ್ತೂರು: ಯಮಹಾ ಕಂಪನಿ ಯ ಅಧಿಕೃತ ಶೋರೂಮ್ ಶರೀಫ್ ಬೈಕ್ಸ್ ಪುತ್ತೂರಿನ ದರ್ಬೆಯ ಸಂತ ಫಿಲೋಮಿನ ಕಾಲೇಜಿನ ಬಳಿ ನ.27 ರಂದು ಶುಭಾರಂಭಗೊಳ್ಳಲಿದೆ.
ನೂತನ ಶೋರೂಮ್ ಅನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಉದ್ಘಾಟನೆಗೊಳಿಸಲಿದ್ದಾರೆ.
ಶೋರೂಮ್ ನ ಸರ್ವಿಸ್ ವಿಭಾಗವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡೆಲ್ಟಾ ಗ್ರೂಪ್ ಮಂಗಳೂರು ಇದರ ನಿರ್ದೇಶಕರಾದ ಸಲೀಂ ಅಹ್ಮದ್, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಕೋಟಿ ಚೆನಯ್ಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ, ಸಿಜ್ಲರ್ಸ್ ಸಾಫ್ಟ್ ಡ್ರಿಂಕ್ಸ್ ನ ಮಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ, ಸೋಹಮ್ ಪವರ್ ರೆನೆವೇಬಲ್ ಎನರ್ಜಿ ಬೆಂಗಳೂರು ಇದರ ಜನರಲ್ ಮ್ಯಾನೇಜರ್ ಹರೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಇನ್ನು ವಿಶೇಷ ಅತಿಥಿಯಾಗಿ ಹುಸೈನ್ ಧಾರಿಮಿ ರೆಂಜಲಾಡಿ ಯವರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.




























