ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಕಳೆದ 36 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನ.30ರಂದು ಸೇವಾ ನಿವೃತ್ತಿಗೊಂಡ ಐವಿ ಗ್ರೆಟ್ಟಾ ಪಾಸ್‌ರವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನ ಒಂದು ಪಯಣ. ತಾಯಿಯ ಗರ್ಭದಿಂದ ಪ್ರಕೃತಿ ಗರ್ಭಕ್ಕೆ ಬಂದ ಮೇಲೆ ಬೇರೇ ಬೇರೆ ರೀತಿಯ ಜವಾಬ್ದಾರಿಗಳು ಇರುತ್ತದೆ. ಎಲ್ಲವನ್ನೂ ನಾವು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದರೆ ನಮ್ಮ ಜೀವನಕ್ಕೆ ಅರ್ಥ ಇದೆ. ನಮ್ಮ ಜೀವನದಲ್ಲಿ ಹಲವರ ಸಹಾಯ ಇರುತ್ತದೆ. ಅವರಿಗೆ ಚಿರಋಣಿಯಾಗಿರಬೇಕು. ಸನ್ನ ಸಾಧನೆಯನ್ನು ದನ್ಯತೆಯಿಂದ ಸ್ವೀಕರಿಸಬೇಕು. ನಿವೃತ್ತಿ ಸಮಯದಲ್ಲಿ ಹಲವು ಭಾವನೆಗಳು ಇರುತ್ತದೆ ಎಂದರು. ಈ ಸಂಸ್ಥೆಯು ೭೫ ವರ್ಷಗಳನ್ನು ಪೂರೈಸಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಸ್ ನಿವೃತ್ತಿ ಹೊಂದುತ್ತಿದ್ದಾರೆ. ಅವರು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರ ಮುಂದಿನ ಜೀವನ ನೆಮ್ಮದಿಯಾಗಿರಲಿ ಅವರ ಕುಟುಂಬಕ್ಕೆ ಬೇಕಾದ ವರಗಳನ್ನು ದೇವರು ಕೊಡಲಿ ಎಂದು ಹಾರೈಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್ ಮಾತನಾಡಿ ಸಂಸ್ಥೆ ಒಳ್ಳೆಯ ರೀತಿಯಲ್ಲಿ ವಿದಾಯ ಸಮಾರಂಭ ಆಯೋಜಿಸಿದೆ. ಐವಿ ಗ್ರೆಟ್ಟಾ ಪಾಸ್‌ರವರು ನಮಗೆ ಆದರ್ಶಪ್ರಾಯರು ಹಾಗೂ ಸ್ಪೂರ್ತಿಯಾಗಿದ್ದವರು. ಅವರನ್ನು ನಾವು ಉಕ್ಕಿನ ಮಹಿಳೆ ಎಂದು ಹೇಳುತ್ತೇವೆ. ಅವರು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ, ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಿದ್ದವರು ಎಂದು ಹೇಳಿದ ಅವರು ಪರಮಾತ್ಮನು ಅವರಿಗೆ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ ಎಂದು ಹಾರೈಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್, ಪದಾಧಿಕಾರಿಗಳಾದ ಸೀತಾರಾಮ ಗೌಡ ಮಿತ್ತಡ್ಕ, ಸುಧಾಕರ ರೈ ಗಿಳಿಯಾಲುರವರು ಸನ್ಮಾನಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಾನ್ ಕುಟಿನ್ಹಾ, ರಕ್ಷಕ ಶೀಕ್ಷಕ ಸಂಘದ ಮಾಹಿ ಅಧ್ಯಕ್ಷ ಮೌರಿಸ್ ಕುಟಿನ್ಹಾರವರು ಸನ್ಮಾನಿಸಿದರು. ಶಾಲಾ ಗೈಡ್ಸ್ ಸಂಸ್ಥೆಯಿಂದ ಹಾಗೂ ಶಾಲಾ ಕ್ರಿಡಾ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.