ಧರ್ಮಸ್ಥಳ: ಕಲ್ಲೇರಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಶಿವಶಕ್ತಿ ಬೇಕರಿಯಲ್ಲಿ ಕಾರ್ಮಿಕ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಡಿ. 1 ರಂದು ಸಾಯಂಕಾಲ ನಡೆದಿದೆ. ಮೂಡಿಗೆರೆ ಜೆ. ಎಂ ರಸ್ತೆಯ ರಾಮೇಗೌಡರ ಪುತ್ರ ಗಿರೀಶ್ (37ವ) ಮೃತ ದುರ್ದೈವಿ.
ಡಿ.1 ರಂದು ಸಂಜೆ ಪ್ರಿಡ್ಜ್ ನ ಸ್ವಿಚ್ ತೆಗೆಯುವ ವೇಳೆ ವಿದ್ಯುತ್ ಪ್ರವಹಿಸಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಗಿರೀಶ್ ಕಳೆದ ಎಂಟು ತಿಂಗಳಿನಿಂದ ಮಧುಕರ್ ಎಂಬವರಿಗೆ ಸೇರಿದ ಶಿವಶಕ್ತಿ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.