ಪುತ್ತೂರು: ಅತ್ಯಾಧುನಿಕ ತಂತ್ರಜ್ಞಾನ , ವಿಶಾಲವಾದ ಸರ್ವಿಸ್ ಸ್ಪೇಸ್, ಪುತ್ತೂರಿನ ಅತೀ ದೊಡ್ಡ ಸರ್ವೀಸ್ ಸ್ಟೇಷನ್ ಅರಸು ಡೀಟೇಲಿಂಗ್ ಕೆಫೆ ಡಿ.6 ರಂದು ಕೂರ್ನಡ್ಕ ಐಡಿಯಲ್ ಚಿಕನ್ ಸೆಂಟರ್ ಮುಂಭಾಗ, ಕೆಮ್ಮಿಂಜೆ ದೇವಸ್ಥಾನದ ದ್ವಾರದ ಸಮೀಪ ಶುಭಾರಂಭಗೊಳ್ಳಲಿದೆ.
ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿಗಳಾದ ಉಜ್ವಲ್ ಪ್ರಭು, ಪ್ರಸನ್ನ ಕುಮಾರ್ ಶೆಟ್ಟಿ, ವೆಂಕಟ್ರಮಣ ಭಟ್,ಸಹಜ್ ಜೆ ರೈ ಬಳಜ್ಜ, ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್, ಅಶ್ರಫ್ ಪುತ್ತೂರು, ಅಬ್ದುಲ್ ಖಾದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.