ಪುತ್ತೂರು:ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್ ಸಂಸ್ಥೆಯ 42ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಡಿ.6 ರಿಂದ ಮೂರು ದಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಯಾದವ ಸಭಾಂಗಣದಲ್ಲಿ ಜರುಗಲಿದೆ ಎಂದು ” ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್ಸ್ ಪುತ್ತೂರು ಇದರ ಮುಖ್ಯ ತರಬೇತುದಾರ ಎಂ.ಸುರೇಶ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
1978ರಲ್ಲಿ ಸ್ಥಾಪನೆಗೊಂಡ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಆಲೈಡ್ ಆರ್ಟ್ಸ್‌ನ ಪುತ್ತೂರು ಶಾಖೆಯ ಆತಿಥ್ಯದಲ್ಲಿ ಕರಾಟೆ ಸ್ಪರ್ಧೆ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 2 ಸಾವಿರಕ್ಕೂ ಮಿಕ್ಕಿ ಕರಾಟೆ ಸ್ಪರ್ಧಾಳುಗಳು ತ್ತು ಭಾಗವಹಿಸಲಿದ್ದಾರೆ. ಡಿ.6ರಂದು ಸಂಜೆ ಗಂಟೆ 4ಕ್ಕೆ ಕರಾಟೆ ಸ್ಪರ್ಧೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೃಷ್ಣ ಭಟ್ ಕೆ.ಎಂ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಡಾ|ಶಿವಪ್ರಕಾಶ್ ಎಂ, ಪುತ್ತೂರು ಕರಾಟೆ ಸಂಸ್ಥೆಯ ಸ್ಥಾಪಕ ಜನಾರ್ದನ ಭಟ್ ಸೇಡಿಯಾಪು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ.8ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಂ, ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ, ರಾಧಾಕೃಷ್ಣಮಂದಿರದ ಕಾರ್ಯದರ್ಶಿ ದಿನೇಶ್ ಪಾಂಗಾಳರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕರಾಟೆಯ ಹಿರಿಯ ಶಿಕ್ಷಕರಾದ ಗೋಪಾಲ್ ವಿ, ಉಮೇಶ್ ಆಚಾರ್ಯ, ನವೀನ್ ಕುಮಾರ್, ಸುಖೇಶ್, ಆತುಲ್ ಭಟ್, ಭುವನ್ ಉಪಸ್ಥಿತರಿದ್ದರು