ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ತೀರಾ ಕೆಳಮಟ್ಟಕ್ಕೆ ಇಳಿದು ಅರೆಬರೆ ಬಟ್ಟೆ ತೊಟ್ಟು ರೀಲ್ಸ್, ವಿಡಿಯೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಇಲ್ಲೊಬ್ಬಳು ಯುವತಿ ಸಾರ್ವಜನಿಕ ಸ್ಥಳದಲ್ಲಿಯೇ ಇಂತಹ ಹುಚ್ಚಾಟಕ್ಕೆ ಕೈ ಹಾಕಿದ್ದು, ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್ ಮೇಲೆ ನಿಂತು ಅಸಭ್ಯವಾಗಿ ನೃತ್ಯ ಮಾಡಿದ್ದಾಳೆ.
ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಇಂತಹ ಲಜ್ಜೆಗೆಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಅಕ್ಕಪಕ್ಕದ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿದ್ದರೂ, ಇದಕ್ಕೆಲ್ಲಾ ಕ್ಯಾರೇ ಅನ್ನದೆ ಓರ್ವ ಯುವತಿ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್ ಮೇಲೆ ಮೈ ಚಳಿ ಬಿಟ್ಟು ಅಸಭ್ಯ ರೀತಿಯಲ್ಲಿ ಮುಜ್ರಾ ಡ್ಯಾನ್ಸ್ ಮಾಡಿದ್ದಾಳೆ.
ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆಕೆ ಜನರನ್ನು ವಿಚಲಿತಗೊಳಿಸುತ್ತಿದ್ದಾಳೆ, ಇದರಿಂದ ರಸ್ತೆ ಅಪಘಾತಗಳು ಸಹ ಉಂಟಾಗಬಹುದು; ಆದಷ್ಟು ಬೇಗ ಮುಜ್ರಾ ನೃತ್ಯವನ್ನು ನಿಷೇಧಿಸಿ” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೆಂಪು ಬಣ್ಣದ ತುಂಡುಡುಗೆ ತೊಟ್ಟ ಯುವತಿ ರಸ್ತೆ ಡಿವೈಡರ್ ಮೇಲೆ ನಿಂತು ಸಾರ್ವಜನಿಕವಾಗಿ ಅಸಭ್ಯ ರೀತಿಯಲ್ಲಿ ನೃತ್ಯ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.