ವಿಟ್ಲ:ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ನಿ. ವಿಟ್ಲ ಇದರ ಎರಡನೇ ನೂತನ ಶಾಖೆ ಮಂಚಿ ಕುಕ್ಕಾಜೆ ಯಲ್ಲಿ ಡಿ. 22 ರಂದು ಶುಭರಂಭಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಶ್ರೀ ಕೃಷ್ಣಯ್ಯ ಕೆ ಅರಮನೆ, ಶ್ರೀ ಜಯರಾಮ ಬಲ್ಲಾಳ್, ಬ್ರಹ್ಮಶ್ರೀ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಬಾಬು ಕೆ ವಿ, ನಿರ್ದೇಶಕರಾದ ಡಾ|| ಗೀತಾಪ್ರಕಾಶ್ ಎ, ಶ್ರೀ ರಾಘವ ಪೂಜಾರಿ, ಶ್ರೀ ರಮೇಶ್ ಕುಮಾರ್ ಆರ್ ಎಸ್, ಶ್ರೀ ಮಾದವ ಪೂಜಾರಿ, ಶ್ರೀ ಸಂಜೀವ ಪೂಜಾರಿ ಎಂ ಎಸ್, ಶ್ರೀ ರವಿ ಬಿ ಕೆ, ಶ್ರೀ ಜಗದೀಶ್ ಪಾಣೆಮಜಲು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಜಯಂತ ಪಿ, ಅಲ್ಲದೇ ಶ್ರೀ ಚಂದ್ರಹಾಸ ಸುವರ್ಣ, ಶ್ರೀ ಲಕ್ಷ್ಮಣ ಆರ್ ಎಸ್, ಶ್ರೀಮತಿ ಮಮತ ಸಂಜೀವಪೂಜಾರಿ, ಶ್ರೀ ಜಯಪ್ರಕಾಶ್ ಪಾಣೆಮಜಲು ಉಪಸ್ಥಿತರಿದ್ದರು.