ವಿಟ್ಲ: ಮದುವೆ ಸಭಾಂಗಣ, ಕಾನ್ಫರೆನ್ಸ್ ಹಾಲ್, ಕಾರ್ಪೋರೆಟ್ ಇವೆಂಟ್ ಗಳಿಗಾಗಿ ಒಳಗೊಂಡಿರುವ ವ್ಯವಸ್ಥಿತ ಹಾಲ್ ಬ್ರೈಟ್ ಆಡಿಟೋರಿಯಂ ವಿಟ್ಲದಲ್ಲಿ ಡಿಸೆಂಬರ್ 12 ಗುರುವಾರ ಸಂಜೆ 6.45 ಕ್ಕೆ ಲೋಕಾರ್ಪಣೆ ಗೊಳ್ಳಲಿದೆ.
ಸಮಾರಂಭದ ಉದ್ಘಾಟನೆಯನ್ನು ಸಯ್ಯದ್ ಇಸ್ಮಾಯಿಲ್ ತಂಙಲ್ ಉಜಿರೆ ಹಾಗೂ ಅಧ್ಯಕ್ಷತೆಯನ್ನು ಸಯ್ಯದ್ ಸಾಬಿಕಲಿ ಶಿಹಾಬ್ ತಂಙಲ್ ಪಾಣಕ್ಕಾಡ್ ನಿರ್ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಯ್ಯದ್ ಅಲಿ ತಂಙಲ್ ಕುಂಬೋಳ್, ಸಯ್ಯದ್ ಮಸ್ಊದ್ ತಂಙಲ್ ಎಟ್ಟಿಕುಲಂ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ (ಖಾಝಿ ಉಡುಪಿ ಮತ್ತು ಚಿಕ್ಕ ಮಗಳೂರು), ಕೆ. ಮಹ್ಮೂದ್ ಫೈಝಿ ವಾಲೆಮುಂಡೋವು, ಸಯ್ಯದ್ ಮುಖ್ತಾರ್ ತಂಙಲ್ ಕುಂಬೋಲ್, ಖಾಝಿ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಶ್ರೀ ಬಂಗಾರು ಅರಸರು ( ವಿಟ್ಲ ಅರಮನೆ) ರೆ|ಫಾ| ಐವನ್ ಮೈಕಲ್ ರಾಡ್ರಿಗಸ್ ( ಧರ್ಮಗುರು, ಅವರ್ ಲೇಡಿ ಆಫ್ ಡಾಲರ್ಸ್ ಚರ್ಚ್ ವಿಟ್ಲ) ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಗೌರವ ಅಥಿತಗಳಾಗಿ ಯು.ಟಿ ಖಾದರ್ (ಮಾನ್ಯ ಅಧ್ಯಕ್ಷರು, ಕರ್ನಾಟಕ ವಿಧಾನಸಭೆ), ಅಶೋಕ್ ಕುಮಾರ್ ರೈ (ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ) ಶ್ರೀ ಹೆಚ್.ಇ ನಾಗರಾಜ್ (ವೃತ್ತ ನಿರೀಕ್ಷಕರು, ಪೊಲೀಸ್ ಠಾಣೆ ವಿಟ್ಲ) ಶ್ರೀ ಕರುಣಾಕರ ನಾಯ್ತೊಟ್ಟು (ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ), ಶ್ರೀ ಬಾಬು ಕೆ.ವಿ (ಅಧ್ಯಕ್ಷರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವಿಟ್ಲ), ಎಮ್.ಎಸ್ ಮಹಮ್ಮದ್ (ಮಾಜಿ ಉಪಾಧ್ಯಕ್ಷರು ದ.ಕ ಜಿಲ್ಲಾ ಪಂಚಾಯತ್), ಮಹಮ್ಮದ್ ಕುಂಞ ವಿಟ್ಲ, ರಶೀದ್ ವಿಟ್ಲ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ಬಂಟ್ವಾಳ), ಶಾಕಿರ್ ಅಳಕೆಮಜಲು ಭಾಗವಹಿಸಲಿದ್ದಾರೆ.
ವಿಟ್ಲ ಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ವಿಶಾಲ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿರುವ ಬ್ರೈಟ್ ಆಡಿಟೋರಿಯಂ ನಲ್ಲಿ 400 ಪುರುಷರಿಗೆ ಮತ್ತು 500 ಮಹಿಳೆಯರಿಗೆ ಏಕಕಾಲದಲ್ಲಿ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮತ್ತು ಆಕರ್ಷಕ ವೇದಿಕೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ತಲಾ 200 ಸೀಟಿನ ಊಟದ ವ್ಯವಸ್ಥೆ, ಸಸ್ಯಹಾರ ಮತ್ತು ಮಾಂಸಾಹಾರ ತಯಾರಿಕೆಗೆ ಪ್ರತ್ಯೇಕ ವಿಶಾಲವಾದ ಅಡುಗೆಮನೆ, ಕಾರ್ಪೊರೇಟ್ ಈವೆಂಟ್, ಸಣ್ಣ ಪುಟ್ಟ ಸಮಾರಂಭಗಳಿಗೆ ಪ್ರತ್ಯೇಕ ಮಿನಿಹಾಲ್, 250 ಕಾರುಗಳ ಪಾರ್ಕಿಂಗ್ ವ್ಯವಸ್ಥೆ, ಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿರುವ ಸುಸಜ್ಜಿತ ಸಭಾಂಗಣ ಹೀಗೆ ಇದೆ ಬ್ರೈಟ್ ಆಡಿಟೋರಿಯಂ ನ ವಿಶೇಷತೆಗಳು.