ಪುತ್ತೂರು: ಕಡಬ ತಾಲೂಕಿನ ಪೆರಾಬೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಡಿ.೯ರಂದು ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾ.ಪಂ ಜಂಟಿಯಾಗಿ ಸರ್ವೆ ಕಾರ್ಯ ನಡೆಸಿದರು.
ಕಡಬ ತಾಲೂಕಿನ ಪೇರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಪರವಣಿಗೆ ಪಡೆದು ಮರುಳುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ದೂರು ನೀಡಿದ್ದರು.
ಇದರಂತೆ ಗಣಿ ಇಲಾಖೆ ಅಧಿಕಾರಿಗಳಾದ ವಸುಧಾ ಜಿಪಿಎಸ್ ಅಧಿಕಾರಿ ಯಶವಂತ್ ಕಡಬ ಪೊಲೀಸ್ ಠಾಣಾ ಎಸೈ ಅಭಿನಂದನ್, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಪೆರಾಬೆ ಗ್ರಾ. ಪಂ. ಪಿಡಿಓ ಶಾಲಿನಿ ಉಪಸ್ಥಿತಿಯಲ್ಲಿ ಸರ್ವೆ ಕಾರ್ಯ ನಡೆಸಿದರು. ಗುತ್ತಿಗೆದಾರರಾದ ಮೋನಪ್ಪ ಗೌಡ, ಗೋಪಾಲಕೃಷ್ಣ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಅಕ್ರಮವಾಗಿಲ್ಲವೆಂಬ ಮಾಹಿತಿ-ದಿನೇಶ್ ಮೆದು: ಜಂಟಿ ಸರ್ವೆ ನಡೆಸಿದ ಅಧಿಕಾರಿಗಳು ಗಡಿ ಗುರುತು ಮಾಡಿದ್ದಾರೆ.ಇಲ್ಲಿ ನಡೆಯುತ್ತಿರುವ ಮರಳುಗಾರಿಕೆ ಅಕ್ರಮವಾಗಿಲ್ಲ.
ಸಕ್ರಮವಾಗಿ ನಡೆಯುತ್ತಿದೆ ಎಂದು ಗುತ್ತಿಗೆದಾರರು ಹಾಗೂ ದೂರು ದಾರರಿಗೆ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ಮುಂದೆ ಸಕ್ರಮವಾಗಿ ಮರಳುಗಾರಿಕೆ ನಡೆಸುವವರಿಗೆ ಅಡ್ಡಿಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿರುವುದಾಗಿ ದಿನೇಶ್ ಮೆದು ತಿಳಿಸಿದ್ದಾರೆ.