ಉಳ್ಳಾಲ: ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇಗುಲ ಸಮೀಪದ ಕಡಲ ತೀರದಲ್ಲಿರುವ ರುದ್ರಪಾದೆ ಬಳಿಯಿಂದ ನಾಪತ್ತೆಯಾಗಿದ್ದ ಮಂಗಳೂರಿನ ಪಡೀಲು ,ವೀರನಗರ ನಿವಾಸಿ ಉದಯ್ ಕುಮಾರ್ (46) ಮೃತದೇಹ ಅಲಿಮಕಲ್ಲು ಎಂಬಲ್ಲಿ ಪತ್ತೆಯಾಗಿದೆ.
ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿರುವ ಅವರು ಸೋಮೇಶ್ವರ ಸಮುದ್ರ ತೀರಕ್ಕೆ ಬಂದವರು ದ್ವಿಚಕ್ರ ವಾಹನ ಸಹಿತ ತನ್ನ ಬಳಿಯಿದ್ದ ಸೊತ್ತುಗಳನ್ನೆಲ್ಲಾ ಮೇಲಿಟ್ಟು ಸಮುದ್ರಕ್ಕೆ ಹಾರಿದ್ದಾರೆ.
ಸಮುದ್ರ ತೀರದಲ್ಲಿದ್ದ ಯುವಕನೋರ್ವ ಸೊತ್ತುಗಳನ್ನು ಕಂಡು ಸಮೀಪದ ಅಂಗಡಿಯವರಲ್ಲಿ ನೀಡಿದ್ದಾರೆ.
ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ , ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಸಮುದ್ರದಲ್ಲಿ ಟಯರ್ ಟ್ಯೂಬ್ ಬಳಸಿ ಶೋಧ ನಡೆಸಿದ್ದಾರೆ.
ಸಂಜೆ ವೇಳೆ ಮೃತದೇಹ ಪತ್ತೆಯಾಗಿದ್ದು, ಮೃತರು ತಂದೆ, ತಾಯಿ, ಪತ್ನಿ, ಒರ್ವ ಪುತ್ರನನ್ನು ಅಗಲಿದ್ದಾರೆ.