ಕೆಲವು ವರ್ಷಗಳ ಹಿಂದೆ ವಿಟ್ಲ-ಮಂಗಳೂರು ರಸ್ತೆಯ ಮಂಗಳಪದವು ಜಂಕ್ಷನ್ ಬಳಿ ಐಡಿಯಲ್ ಫ್ಯೂಯಲ್ ಪೆಟ್ರೋಲ್ ಪಂಪ್ ಉದ್ಘಾಟನೆಗೊಂಡಿದ್ದು, ಇಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಪ್ರಿಯತೆ ಪಡೆದಿದೆ.
ವಿಟ್ಲ ಸುತ್ತಮುತ್ತಲಿನ ಕಾರು , ಆಟೋ ಚಾಲಕರ ಸಹಿತ ಹಲವು ವಾಹನ ಮಾಲಕರು ತಮ್ಮ ವಾಹನಕ್ಕೆ CNG ಅನಿಲಕ್ಕಾಗಿ ದೂರದ ಉಪ್ಪಿನಂಗಡಿ,ಪುತ್ತೂರು,ಮುಡಿಪು ಮೊದಲಾದ ಕಡೆಗೆ ಹೋಗುವ ಅನಿವಾರ್ಯತೆ ಎದುರಾಗಿತ್ತು.
ಇದರಿಂದ CNG ವಾಹನ ಮಾಲಕರಿಗೆ ಆಗುತಿರುವ ತೊಂದರೆ ಮನಗಂಡು CNG ಸೌಲಭ್ಯ ಆರಂಭಿಸಿದ್ದು, ವಿಟ್ಲ ದಲ್ಲಿ ಪ್ರಥಮ ಬಾರಿಗೆ ಐಡಿಯಲ್ ಫ್ಯೂಯೆಲ್ಸ್ ಪೆಟ್ರೋಲ್ ಪಂಪ್ ನಲ್ಲಿ CNG ಅನಿಲವು 13ನೇ ಡಿಸಂಬರ್ 2024 ನೇ ಶುಕ್ರವಾರ ಸಂಜೆ ಗಂಟೆ 3.00 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ
ಗೈಲ್ ಗ್ಯಾಸ್ ಲಿಮಿಟೆಡ್ ಸಹಯೋಗದೊಂದಿಗೆ ಉತ್ತಮ ಗುಣಮಟ್ಟದ cNG ಗ್ಯಾಸ್ ದೊರೆಯಲಿದೆ.
ಬೂಸ್ಟರ್ ಕಂಪ್ರೆಸರ್ ಸೌಲಭ್ಯವಿರುದರಿಂದ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಗ್ರಾಹಕರು ಇದರ ಸದುಪಯೋಗಪಡಿಸಬೇಕೆಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.