ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ದರ್ಬೆ ವೃತ್ತದ ಬಳಿಯ ನಿರಾಳ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರಿಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಡಿ.14ರ ರಾತ್ರಿ ನಡೆದಿದೆ.
ಪುತ್ತೂರು ಕಸಬಾ ಗ್ರಾಮ ದರ್ಬೆ ನಿವಾಸಿ ಜಗದೀಶ್ ರೈ ಹಲ್ಲೆಗೊಳಗಾದವರು.
ಬೆಳ್ಳಾರೆ ಮೂಲದ ರಾಜರಾಮ್ ಭಟ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಬಾರ್ ಮುಚ್ಚುವ ಸಮಯ ಮೀರಿದರೂ ಹೋಗದೇ ಇದೇ ವಿಚಾರದಲ್ಲಿ ತಗಾದೆ ಎತ್ತಿ ಬಳಿಕ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಜಗದೀಶ್ ರೈ ಅವರಿಗೆ ರಾಜಾರಾಮ್ ಭಟ್ ಮತ್ತು ಅವರ ತಂಡದವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆಂದು ಅಲ್ಲದೇ ಬಾರ್ ಎದುರಿನ ರಸ್ತೆ ಬದಿಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆಯೂ ತಡೆದು ನಿಲ್ಲಿಸಿ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಜಗದೀಶ್ ರೈ ಅವರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಜಗದೀಶ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸರು ಅ.ಕ್ರ 118/2024 ಕಲಂ:352, 115(2), 126(2) , 351(2), ಜೊತೆಗೆ 3 (5)ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

























