ಪುತ್ತೂರು: ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಚಾರ್ವಾಕ ಗ್ರಾಮದ ದೇವಿನಗರ ನಿವಾಸಿ ದೇಜಪ್ಪ ಯಾನೆ ದಿವೀಶ್ ಮಡಿವಾಳ (45) ಮೃತ ವ್ಯಕ್ತಿ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ದಿವೀಶ್ ರವರು ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿದ್ದು ಮೂಲ ಮನೆ ಚಾರ್ವಾಕದಲ್ಲಿ ದೈವಗಳ ಕಾರ್ಯಕ್ರಮದ ನಿಮಿತ್ತ ಬಂದಿದ್ದರು.
ಬೆಳಗ್ಗಿನ ಜಾವ ಹೃದಯಾಘಾತವಾದ ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಮೃತರು ತಂದೆ, ಪತ್ನಿ ಹಾಗು ಮೂವರು ಮಕ್ಕಳನ್ನು ಅಗಲಿದ್ದಾರೆ.