ಚಾರ್ಮಾಡಿ ಘಾಟ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾರ್ಮಾಡಿ ಘಾಟ್ನ ಏಕಲವ್ಯ ಶಾಲೆಯ ಬಳಿ ನಡೆದಿದೆ.
ಬ್ಲೇಡ್ನಿಂದ ಕುತ್ತಿಗೆ ಕುಯ್ದುಕೊಂಡು ಮನು(20) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಟುಂಬ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಹಾಸನ ಮೂಲದ ಮನು ಮುಂದಾಗಿದ್ದ ಎಂದು ತಿಳಿಬಂದಿದೆ.
ಇನ್ನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಾಟ್ಸಾಪ್ನಲ್ಲಿ ಪೋಷಕರು, ಸ್ನೇಹಿತರಿಗೆ ಮನು ಲೊಕೇಶನ್ ಕಳಿಸಿದ್ದ.
ಕೊಡಲೇ 112ಗೆ ಕರೆ ಮಾಡಿ ಯುವಕನನ್ನ ರಕ್ಷಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಪೋಷಕರು ಮನವಿ ಮಾಡಿದ್ದಾರೆ.
ಹೀಗಾಗಿ ಯುವಕನನ್ನು ರಕ್ಷಿಸಿ ಬಣಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.