ಪುತ್ತೂರು: ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ವಾರ್ಷಿಕ ಮಹಾಸಭೆ ಡಿ.13 ರಂದು ಗೌರವಾಧ್ಯಕ್ಷರಾದ ಸಯ್ಯಿದ್ ಅಹಮದ್ ಪೂಕೋಯ ತಂಙಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಮಿಟಿಯ ಪ್ರಧಾನ ಕಾರ್ಯದರ್ಶಿಯಾದ ಹಕೀಂ ಡಿಕೆ ಗತವರ್ಷದ ವರದಿ ವಾಚಿಸಿ ಮಂಡಿಸಿದರು.
ಬಳಿಕ ಸಯ್ಯಿದ್ ಅಹಮದ್ ಪೂಕೋಯ ತಂಙಲ್ ನೇತೃತ್ವದಲ್ಲಿ 2024-25ನೇ ಸಾಲಿನ ನೂತನ ಕಮಿಟಿಯನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಲ್ ಹಾಜಿ ಸಯ್ಯಿದ್ ಅಹಮದ್ ಪೂಕೋಯ ತಂಙಲ್ ,ಅಧ್ಯಕ್ಷರಾಗಿ ಅಶ್ರಫ್ ಹಾಜಿ ದಾರಂದಕುಕ್ಕು , ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಹಾಜಿ ಕೊಡಾಜೆ , ಕೋಶಾಧಿಕಾರಿಯಾಗಿ ಉಮರ್ ದಾರಂದಕುಕ್ಕು ,ಉಪಾಧ್ಯಕ್ಷರಾಗಿಹಾಜಿ ಅಬ್ದುಲ್ ಲತೀಫ್ ಕೆಮ್ಮಾಯಿ
, ಜೊತೆಕಾರ್ಯದರ್ಶಿಯಾಗಿ ಹಕೀಂ ಡಿಕೆ ಯವರನ್ನು ನೇಮಕ ಮಾಡಲಾಯಿತು.
ಇನ್ನುಳಿದಂತೆ 20 ಮಂದಿ ಸದಸ್ಯರನ್ನು ಕಾರ್ಯಕಾರಿಣಿ ಸಮಿತಿಗೆ ನೇಮಿಸಲಾಯಿತು.
ಕಾರ್ಯಕ್ರಮವನ್ನು ಖತೀಬ್ ಉಸ್ತಾದರಾದ ಮುಈನುದ್ದೀನ್ ಮದನಿ ಉದ್ಘಾಟಿಸಿದರು.


























