ಮಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಸಹೃದಯ ಜನನಾಯಕ ಇನಾಯತ್ ಅಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಇನಾಯತ್ ಅಲಿ ಅಭಿಮಾನಿ ಬಳಗ’ ದ ವತಿಯಿಂದ ಡಿ.19 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಗ್ಗೆ 11.30 ಕ್ಕೆ ಸುರತ್ಕಲ್ ನ ಲಯನ್ಸ್ ವಿಶೇಷ ಶಾಲೆಯಲ್ಲಿ ಕಾರ್ಯಕ್ರಮ ಮತ್ತು ಸಂಜೆ 4 ಕ್ಕೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇಲ್ಲಿಯ ರೋಗಿಗಳಿಗೆ ಸಹವರ್ತಿಗಳಿಗೆ ಎಂ. ಫ್ರೆಂಡ್ಸ್ ಕಾರುಣ್ಯ ಯೋಜನೆ ಅಡಿಯಲ್ಲಿ ಊಟ ವಿತರಣೆ ಕಾರ್ಯಕ್ರಮ ನಡೆಯಲಿದೆ.