ನಮ್ಮ ತುಳುನಾಡು ಟ್ರಸ್ಟ್ (ರಿ) ಧರ್ಮನಗರ ಇವರು ನಡೆಸುವ ಮಾಹಿತಿಗಳ ಗ್ರಂಥ ರಚನೆ ಹಾಗೂ ತುಳು ಕಾರ್ಯಕ್ರಮಗಳ ಯೋಜನೆಗೆ ಶಾಸಕ ಅಶೋಕ್ ಕುಮಾರ್ ರೈ ಯವರ ಮನವಿಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಕ್ಷಣವೇ 10 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ.
ತುಳು ಭಾಷೆಯನ್ನು ಹೆಚ್ಚುವರಿ ಆಗಿ ಸೇರ್ಪಡೆಗೊಳಿಸಬೇಕೆಂದು ಇತ್ತೀಚೆಗೆ ಸದನದಲ್ಲಿ ಶಾಸಕ ಅಶೋಕ್ ರೈ ಯವರು ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.
ಬಾಕ್ಸ್ : ತುಳು ಹೆಚ್ಚುವರಿ ಭಾಷೆಯಾಗಿ ಸೇರ್ಪಡೆಗೊಳಿಸುವ ವರೆಗೆ ಹೋರಾಟ ನಿರಂತರ. ತುಳು ಭಾಷೆಯ ಸಲುವಾಗಿ ಒಳ್ಳೆಯ ಕೆಲಸ ಮಾಡುವ ಸಂಘ, ಸಂಸ್ಥೆಗಳಿಗೂ ನಮ್ಮ ಬೆಂಬಲ ನಿರಂತರ. ಮಾನ್ಯ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ತಕ್ಷಣವೇ 10 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.