ಪುತ್ತೂರು: ಬೆದ್ರಾಳ ಕೊರಜಿಮಜಲು, ಎಲಿಕಾ ಎಂಬಲ್ಲಿ ನೂತನ ನವೀಕೃತ ಆ ರೂ ಢ ಮತ್ತು ದೈವಸ್ಥಾನದಲ್ಲಿ ಶ್ರೀ ನಾಗ ಮತ್ತು ರಕ್ತೇಶ್ವರೀ ಸಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ಮತ್ತು ವೇದಮೂರ್ತಿ ಕೆಮ್ಮಿಂಜೆ ಶ್ರೀ ವೆಂಕಟಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ.22/23 ರಂದು ನಡೆಯಲಿದೆ.
ಡಿ.22 ರಂದು ಸಂಜೆ 5 ಕ್ಕೆ ತಂತ್ರಿಗಳ ಆಗಮನ ಸಂಜೆ 6 ಕ್ಕೆ ಸಾಮೂಹಿಕ ಪ್ರಾರ್ಥನೆ, ವಿಶ್ವಕರ್ಮ ಪ್ರಾರ್ಥನೆ ಶಿಲ್ಪಿಗಳ ಬೀಳ್ಕೊಡುಗೆ, ಆಚಾರ್ಯವರಣ, ಸ್ಪಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ದುರ್ಗಾ ನಮಸ್ಕಾರ ಪೂಜೆ, ನೂತನ ಬಿಂಬ ಶುದ್ಧಿ, ಮೃತ್ತಿಕಾಧಿವಾಸ, ಜಲಾಧಿವಾಸ, ಧ್ಯಾನಾಧಿವಾಸ ಮಹಾಪೂಜೆ, ಪ್ರಾರ್ಥನೆ, ಶೈಯ್ಯಾಧಿವಾಸ ನಡೆಯಲಿದೆ.
ಡಿ.23 ರಂದು ಬೆಳಗ್ಗೆ 7 ರಿಂದ ಸ್ಪಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹವನ, ಪವಮಾನ ಸೂಕ್ತಾದಿ ಪ್ರಾಯಶ್ಚಿತ ಹೋಮ, ಪ್ರತಿಷ್ಠಾ ಪ್ರಧಾನಹೋಮ, ಬ್ರಹ್ಮಕಲಶ ಪ್ರತಿಷ್ಠೆ, ಬಳಿಕ ಬೆಳಗ್ಗೆ 9.18 ರ ನಂತರ ಒದಗುವ ಮಕರ ಲಗ್ನ ಸುಮೂರ್ಥದಲ್ಲಿ ನಾಗ ಮತ್ತು ರಕ್ತೇಶ್ವರೀ ಸಪರಿವಾರ ಧರ್ಮದೈವಗಳ ಪುನಃ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಿರ್ಣಯ ಪ್ರಾರ್ಥನೆ, ಪಂಚಮೃ ತಾಭಿಷೇಕ, ಸರ್ವಪ್ರಾಯಶ್ಚಿತ ಆಶ್ಲೇಷ ಬಲಿ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ವಟು ಬ್ರಾಹ್ಮಣ ಸುಹಾಸಿನಿ ಆರಾಧನೆ, ಪ್ರಸಾದ ವಿತರಣೆ ಮಧ್ಯಾಹ್ನ ಅಂತಸಂತರ್ಪಣೆ ನಡೆಯಲಿದೆ.