ಪುತ್ತೂರು: ಮಂಜಲ್ಪಪಡ್ಪು ವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ ಇ ಎಂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಡಿ.28 ರಂದು ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ದಿ. ಸಿದ್ದಾರ್ಥ ಬಲ್ಯಾಯ ವೇದಿಕೆಯಲ್ಲಿ ಸಭಾಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದ್ದು ಖ್ಯಾತ ಇಂಜಿನಿಯರ್ ವಸಂತ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಿದ್ದಾರೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಶಿಧರ್, ಹಾರಾಡಿ ಕ್ಲಸ್ಟರ್ ನ ಸಿ ಆರ್ ಪಿ ಕೆ ಎಲ್ ಪ್ರಸಾದ್, ಉದ್ಯಮಿಗಳಾದ ಅಬ್ದುಲ್ ಹಾಸೀಂ ಕಲ್ಲೇಗ, ಕೆ ಲೋಕೇಶ್ ಗೌಡ ಕುಂದ್ರುಕೋಟೆ, ನಝೀರ್ ಕಾರ್ಜಲ್, ನಗರಸಭಾ ಸದಸ್ಯ ವಸಂತ ಕಾರೆಕ್ಕಾಡು ಉಪಸ್ಥಿತರಿರಲಿದ್ದು ಅಧ್ಯಕತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಮುರ ವಹಿಸಲಿದ್ದಾರೆ.
ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಕ್ಕೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ನಗರಸಭಾ ಸದಸ್ಯ ಜೀವಂಧರ್ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಕಲ್ಲೇಗ ಕಲ್ಕುಡ ದೈವಸ್ಥಾನದ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಸುದಾನ ವಸತಿಯುತ ಶಾಲೆಯ ಸಂಚಾಲಕರಾದ ವಿಜಯ್ ಹಾರ್ವಿನ್, ರಾಘವೇಂದ್ರ ಎಚ್ ಎಂ, ಪಿ ಎಲ್ ಡಿ ಬ್ಯಾಂಕ್ ನ ಸದಸ್ಯ ಯುವರಾಜ್ ಗೌಡ ಉದ್ಯಮಿ ಪ್ರಕಾಶ್ ಭಟ್, ಷರೀಫ್, ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಂಕರನಾರಾಯಣ ಮಡಿಪಳಿತ್ತಾಯ ಉಪಸ್ಥಿತರಿರಲಿದ್ದು ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ ಬಿಷಪ್ ರೆ. ಹೇಮಚಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅನರ್ಘ್ಯ ರತ್ನ ಪ್ರಶಸ್ತಿಯನ್ನು ನಗರಸಭಾ ಸದಸ್ಯ ಜೀವಂಧರ್ ಜೈನ್, ಉದ್ಯಮಿ ಉಜ್ವಲ್ ಪ್ರಭು, ವೈದ್ಯರಾದ ಪ್ರಸನ್ನ ಶೆಟ್ಟಿ ಮಂಗಳೂರು, ನಗರಸಭಾ ಸದಸ್ಯ ದಿನೇಶ್ ಗೌಡ ಶೇವಿರೆ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹಫ್ಸಾ ಬಾನು ಬೆಂಗಳೂರು, ಯುವ ಉದ್ಯಮಿ ಅಭಿಜಿತ್ ಕೊಳಕೆ ಮಾರ್, ಪ್ರಜ್ಞಾ ಆಶ್ರಮದ ಸಂಚಾಲಕ ಅಣ್ಣಪ್ಪ ವಿ ಎಂ, ಉದ್ಯಮಿ ಅಂಶಿತ್, ಕ್ಷಯ ರೋಗ ತಜ್ಞ ದೀಲ್ಯಾನ್, ನಿವೇದಿತಾ ವಿ ರಾಮಕುಂಜ ಇವರು ಸ್ವೀಕರಿಸಲಿದ್ದಾರೆ.
ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.