ಮೈಸೂರು: ಪ್ರೀ ವೆಡ್ಡಿಂಗ್ ಶೂಟ್‌ಗೆ ಕರೆಸಿದ ವ್ಯಕ್ತಿ 8 ಲಕ್ಷ ರೂ. ಮೌಲ್ಯದ ಕ್ಯಾಮೆರಾ ಕದ್ದು ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿಮ್ಮ ಇನ್‌ಸ್ಟಾಗ್ರಾಮ್ ಫ್ರೋಪೈಲ್ ನೋಡಿದ್ದೇನೆ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಗಣೇಶ್ ಎಂಬ ವ್ಯಕ್ತಿ ಮೈಸೂರಿನ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋ ಗ್ರಾಫರ್‌ಗೆ ಕರೆ ಮಾಡಿದ್ದಾನೆ.
ಬಳಿಕ 75,000 ರೂ.ಗೆ ಫೋಟೋ ಶೂಟ್ ಅಗ್ರಿಮೆಂಟ್ ಮಾಡಿಕೊಂಡು ಇದಕ್ಕೆ 2,000 ಹಣವನ್ನು ಆನ್‌ಲೈನ್‌ನಲ್ಲಿ ಗಣೇಶ್ ವರ್ಗಾವಣೆ ಸಹ ಮಾಡಿದ್ದಾನೆ.
ಮೈಸೂರಿಗೆ ಫೋಟೋಗ್ರಾಫರ್ ಭಾರ್ಗವ್‌ನನ್ನ ಕರೆಸಿದ ಗಣೇಶ್ ತಾನೇ ಬುಕ್ ಮಾಡಿದ ಲಾಡ್ಜ್‌ನಲ್ಲಿ ಉಳಿಯುವಂತೆ ಹೇಳಿದ್ದಾನೆ. ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ, ಅವರ ಜೊತೆ ಊಟ ಮಾಡಿಕೊಂಡು ಬನ್ನಿ. ಫೋಟೋ ಶೂಟ್‌ಗೆ ಅವರಿಗೆ ಲೊಕೇಷನ್ ತೋರಿಸಿ ಎಂದು ಭಾರ್ಗವ್ ನನ್ನು ಹೊರಗಡೆ ಕಳುಹಿಸಿದ ಗಣೇಶ್ ನಂತರ ಕೆಲಹೊತ್ತಿನ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಆಗ ಭಾರ್ಗವ್ ರೂಂ ನಲ್ಲಿ ಬಂದು ನೋಡಿದಾಗ ತನ್ನ ಕ್ಯಾಮೆರಾ ಅಲ್ಲಿ ಇರಲಿಲ್ಲ. ಸದ್ಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ