ಪುತ್ತೂರು: ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್‌ಇನ್ಸೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಖಿಲ ಪೂಜಾರಿ ಅವರು ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದು ಇನ್ನಷ್ಟೇ ನೇಮಕಾತಿ ಆಗಬೇಕಾಗಿದೆ.
ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರೈಸಿದ್ದ ಇವರು ಪ್ರೌಢಶಿಕ್ಷಣವನ್ನು ಕುಲಶೇಖರದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದ್ದರು.
ಮಂಗಳೂರು ಸಂತ ಆಗ್ನೆಸ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿರುವ ಅಖಲಾ ಪೂಜಾರಿ ಅವರು ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸೆಕ್ಟರ್ ಹುದ್ದೆಯ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
ಇವರು ಮಂಗಳೂರು ಸಿಸಿಬಿಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿರುವ ಸವಣೂರು ದೇವಸ್ಯದ ಶೀನಪ್ಪ ಪೂಜಾರಿ ಮತ್ತು ಹೇಮಾವತಿ ಬಂಬಿಲ ದೋಳ ಅವರ ಪುತ್ರಿ.