ವಿಟ್ಲ: ಬಿಲ್ಲವ ಸಂಘ (ರಿ.) ವಿಟ್ಲ ಮತ್ತು ಮಹಿಳಾ ಬಿಲ್ಲವ ಘಟಕ ಹಾಗೂ ಯುವವಾಹಿನಿ (ರಿ.) ವಿಟ್ಲ ಇದರ ಪ್ರಯೋಜಕತ್ವದಲ್ಲಿ ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಕಾಲಾವಧಿ ಜಾತ್ರೆಯ ಪ್ರಯುಕ್ತ ಲಕ್ಷದೀಪೋತ್ಸವದಂದು (ಜ.14) 2 ನೇ ವರ್ಷದ ಕಲಾಕಾಣಿಕೆ ರಂಗತರಂಗ ಕಲಾವಿದರು ಕಾಪು ಅರ್ಪಿಸುವ ತುಳು ನಾಟಕ ಒರಿಯೆ ಇದರ ಆಮಂತ್ರಣ ಪತ್ರಿಕೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಅರಮನೆಯ ಕೃಷ್ಣಯ್ಯ ಕೆ ವಿಟ್ಲ, ಜಯರಾಮ್ ಬಲ್ಲಾಳ್, ಪ್ರಸಾದ್ ವಿಟ್ಲ, ಬಿಲ್ಲವ ಸಂಘ (ರಿ.) ವಿಟ್ಲ ಇದರ ಅಧ್ಯಕ್ಷರಾದ ಮಾಧವ ಪೂಜಾರಿ ಪಟ್ಲ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ ಎಸ್
ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ, ಚಂದ್ರಹಾಸ ಸುವರ್ಣ, ಸುಂದರ ಪೂಜಾರಿ, ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ ಉಪಸ್ಥಿತರಿದ್ದರು